ನಾನು ಸೀನಿಯರ್​ ರೌಡಿ, ನನಗೆ ಟಿಕೆಟ್​ ಕೊಡಿ’; ತೆಲಂಗಾಣ ಕಾಂಗ್ರೆಸ್​ ನಾಯಕ

ಹೈದ್ರಾಬಾದ್​: ಅವಧಿಗೆ ಮುನ್ನ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ತೆಲಂಗಾಣದಲ್ಲಿ ಈಗ ಟಿಕೆಟ್​ ಪಡೆಯಲು ನಾಯಕರು ಭಾರೀ ಪೈಪೋಟಿ ಮುಂದಾಗಿದ್ದಾರೆ. ಟಿಕೆಟ್​ ಪಡೆಯಲು ಕ್ಷೇತ್ರದ ಅಭಿವೃದ್ಧಿ, ಶಾಸಕರ ಕಾರ್ಯ ವೈಖರಿ ಮಾತ್ರ ಮಾನದಂಡವಾಗಿರದೆ ಯಾವ ಮಟ್ಟಿಗೆ ರೌಡಿ ಹಿನ್ನಲೆ ಹೊಂದಿದ್ದಾರೆ ಎಂಬುದು ಪ್ರಮುಖವಾಗಿದೆ.
ಸದ್ಯ ಹೈ ವೋಲ್ಟೆಜ್​ ರಾಜಕೀಯ ರಣರಂಗವಾಗಿರುವ ತೆಲಂಗಾಣದಲ್ಲಿ ಟಿಕೆಟ್​ ಪಡೆಯಲು ಮುಂದಾಗಿರುವ ಕಾಂಗ್ರೆಸ್​ನ ಬಿಲ್ಲಾ ಸುಧೀರ್​ ರೆಡ್ಡಿ ‘ತಾನು ಸೀನಿಯರ್​ ರೌಡಿಯಾಗಿದ್ದು, ನನಗೆ ಟಿಕೆಟ್​ ನೀಡಬೇಕು’ ಎಂದು ಹಿರಿಯ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಗಂಭೀರ ಕ್ರಿಮಿನಲ್​ ಅಪರಾಧ ಪ್ರಕರಣಗಳು ರೆಡ್ಡಿ ಮೇಲೆ ಇದ್ದು, ಇದೇ ತಮ್ಮ ಧನಾತ್ಮಕ ಅಂಶದಂತೆ ಬಿಂಬಿಸಿಕೊಂಡಿದ್ದಾರೆ. ಪಕ್ಷದಲ್ಲಿರುವ ​ ರೌಡಿಗಳ ಹಿನ್ನಲೆಯನ್ನು ಪರಿಶೀಲಿಸಿ, ಆಗ ನಾನೆಷ್ಟು  ಹಿರಿಯ ರೌಡಿ ಎಂಬುದು ನಿಮಗೆ ತಿಳಿಯಲಿದೆ ಎಂದಿದ್ದಾರೆ.
‘ಕಾಂಗ್ರೆಸ್​ ಪಕ್ಷ ಯಾರಾದರೂ ರೌಡಿ ಶೀಟರ್​ರನ್ನು ಆಯ್ಕೆ ಮಾಡಿದರೆ, ಅದು ನಾನೇ ಆಗಬೇಕು. ನಾನು ಈಗಾಗಲೇ ಅಪಹರಣ ಹಿಂಸೆ, ಗಲಭೆ, ಕಿರುಕುಳ, ಅವ್ಯವಹಾರದಂತಹ ಪ್ರಕರಣಗಳು ನನ್ನ ಮೇಲಿದೆ. ಆದರೆ ನಾನು ಯಾವುದೇ ಕುಟುಂಬಕ್ಕೆ ಹಾನಿ ಮಾಡಿಲ್ಲ’ ಎಂದು ಪಕ್ಷದ ಮುಖಂಡರ ಮುಂದೆ ತಮ್ಮ ಸಾಧನೆ ಬಿಚ್ಚಿಟ್ಟಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ