ಬೆಂಗಳೂರು, ಅ.29-ಸಿಪ್ ಅಬಾಕಸ್ ಸಂಸ್ಥೆ ಈವರೆಗೂ 5ಲಕ್ಕಕ್ಕೂ ಹೆಚ್ಚಿನ ಮಕ್ಕಳನ್ನು ಗಣಿತದಲ್ಲಿ ಜೀನಿಯಸ್ ಎನ್ನುವ ರೀತಿ ತರಬೇತುಗೊಳಿಸಿದೆ ಸಂಸ್ಥೆಯ ರಾಜ್ಯ ಮುಖ್ಯಸ್ಥ ನರೇಂದ್ರ ತಿಳಿಸಿದರು.
ಎಸ್.ಐ.ಪಿ.ಅಕಾಡೆಮಿ ಇಂಡಿಯಾ ವತಿಯಿಂದ ಹೆಬ್ಬಾಳದ ಮಾನ್ಯತಾ ಟೆಕ್‍ಪಾರ್ಕ್‍ನ ವೈಟ್ ಆರ್ಚೀಡ್‍ನಲ್ಲಿ ಏರ್ಪಡಿಸಿದ್ದ ಎಸ್.ಐ.ಪಿ. ಪ್ರಾಡಿಜಿ ಪ್ಲಸ್ 2018ರ 16ನೇ ರಾಜ್ಯ ಮಟ್ಟದ ಅಬಾಕಸ್ ಬೌದ್ಧಿಕ ಅಂಕಗಣಿತ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಪ್ರಾಡಿಜಿ ಎಂದರೆ ಅದ್ಭುತ, ಅಸಾಧಾರಣ ಎಂದರ್ಥ. ಮಕ್ಕಳಲ್ಲಿನ ಅದ್ಭುತ, ಬೌದ್ಧಿಕ ಸಾಮಥ್ರ್ಯ ಹೊರಹೊಮ್ಮಿಸುವುದೇ ಈ ಸ್ಪರ್ಧೆಯ ಉದ್ದೇಶ ಎಂದರು.
ಗಣಿತ ಎಂದರೆ ಎಲ್ಲರಿಗೂ ಒಂದು ತರಹದ ತಲೆನೋವು. ಆದರೆ ಈ ಪುಟಾಣಿಗಳಿಗೆ ಮಾತ್ರ ಬಹಳ ಸಲೀಸು. 2198×28+9850/8+350=?
ಈ ಲೆಕ್ಕವನ್ನು ಉತ್ತರಿಸಲು ನಮಗೆ ಕ್ಯಾಲ್ಕುಲೇಟರ್ ಬೇಕೇ ಬೇಕು. ಆದರೂ ಕೂಡ ಉತ್ತರ ಹೇಳಲು ಕೆಲ ಸಮಯ ಅತ್ಯವಶ್ಯ. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 4000ಕ್ಕೂ ಹೆಚ್ಚು ಮಕ್ಕಳು, ಮೇಲೆ ತೋರಿಸಿದ ಲೆಕ್ಕವನ್ನು ಕೂಡಿಸುವುದು, ಕಳೆಯುವುದು, ಭಾಗಿಸುವುದು , ಗುಣಿಸುವುದನ್ನು ತಮ್ಮ ಮನಸ್ಸಿನಲ್ಲಿಯೇ ಲೆಕ್ಕ ಹಾಕಿ ಕ್ಷಣಾರ್ಧದಲ್ಲಿ ಮುಗಿಸಿದರು.
ನಂತರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಅನುರಾಧ ನಾಗರಾಜನ್, ಪಿ.ಎಸ್.ಜೈಶಂಕರ್, ಹೆಚ್.ಎನ್.ನರೇಂದ್ರ, ಕೆಲ್ವಿನ್ ತ್ಯಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.