ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ದಾಖಲೆಯನ್ನ ಸರಿಗಟ್ಟಲು ಸಜ್ಜಾಗಿದ್ದಾರೆ.
ಪ್ರತಿ ಪಂದ್ಯದಲ್ಲೂ ಶತಕಗಳನ್ನ ಬಾರಿಸಿ ದಾಖಲೆಗಳ ಮೇಲೆ ದಾಖಲೆ ಬರೆದು ಮಿಂಚುತ್ತಿರುವ ಕ್ಯಾಪ್ಟನ್ ಕೊಹ್ಲಿ ಈಗ ಮತ್ತೊಂದು ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ವಿಂಡೀಸ್ ವಿರುದ್ಧ ಕಳೆದ ಮೂರು ಪಂದ್ಯಗಳಲ್ಲಿ 140, 157 ಮತ್ತು 107 ರನ್ಗಳನ್ನ ಬಾರಿಸಿ ಹ್ಯಾಟ್ರಿಕ್ ಶತಕಗಳನ್ನ ಬಾರಿಸಿದ ಸಾಧನೆ ಮಾಡಿದ್ದಾರೆ.
ಇಂದು ವಿಂಡೀಸ್ ವಿರುದ್ಧವೂ ಶತಕ ಬಾರಿಸಿದ್ರೆ ಸರಣಿಯಲ್ಲಿ ನಾಲ್ಕನೆ ಶತಕವಾಗಲಿದೆ. ಈ ಹಿಂದೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ 2015ರ ವಿಶ್ವಕಪ್ನಲ್ಲಿ ಸತತ ನಾಲ್ಕು ಶತಕಗಳನ್ನ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನ ಕೊಹ್ಲಿ ಸರಿಗಟ್ಟುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.