ಟೇಕ್​ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಮುದ್ರದಲ್ಲಿ ಪತನಗೊಂಡ ಇಂಡೋನೆಷ್ಯಾ ಲಯನ್ ಏರ್ ವಿಮಾನ

ಜಕಾರ್ತ : ಇಂಡೋನೆಷ್ಯಾ ರಾಜಧಾನಿಯಿಂದ ಪಾಂಗ್​ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್ ಬೋಯಿಂಗ್ 737 ವಿಮಾನ ಸೋಮವಾರ ಬೆಳಿಗ್ಗೆ ಪತನಗೊಂಡಿದೆ. ಈ ವಿಮಾನದಲ್ಲಿ 188 ಜನ ಪ್ರಯಾಣಿಕರು ಹಾಗೂ ಪೈಲೆಟ್​ಗಳು ಇದ್ದರು ಎನ್ನಲಾಗಿದೆ. ಅವರೆಲ್ಲರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಕಾರ್ತ ದಿಂದಬೆಳಗ್ಗೆ ಸುಮಾರು 6.33ರ ಸುಮಾರಿಗೆ ವಿಮಾನ ಏರ್ ​​ಟ್ರಾಫಿಕ್​​​​​ ಕಂಟ್ರೋಲರ್​ನ ಸಂಪರ್ಕ ಕಳೆದುಕೊಂಡಿತ್ತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬಳಿಗ್ಗೆ ಪಾಂಗ್​ಕಲ್ ಪಿನಾಗ್ ದ್ವೀಪದಲ್ಲಿ ಇಳಿಯಬೇಕಿದ್ದ ಈ ವಿಮಾನ ಸಮುದ್ರಕ್ಕೆ ಪತನಗೊಂಡಿದೆ.
ವಿಮಾನದಲ್ಲಿದ್ದ ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಮುದ್ರದಲ್ಲಿ ವಿಮಾನದ ಬಿಡಿಭಾಗಗಳು ತೇಲುತ್ತಿದ್ದು ಹಲವು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸುಮಾರು 188 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ ಈ ವಿಮಾನ ಹೊಂದಿತ್ತು. ಇಂಡೋನೆಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿಯು ಶೋಧ ಕಾರ್ಯದಲ್ಲಿ ನಿರತವಾಗಿದೆ.
2015 ಆಗಸ್ಟ್​ ನಲ್ಲಿ ಇದೇ ರೀತಿಯಾಗಿ ವಿಮಾನವೊಂದು ಪತನಗೊಂಡು ಸುಮಾರು 54 ಪ್ರಯಾಣಿಕರು ದುರಂತದಲ್ಲಿ ಸಾವನ್ನಪ್ಪಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ