ಮುಂಬೈ:ಗಾಯಗೊಂಡ ಹುಲಿಯಂತಾಗಿರುವ ಟೀಂ ಇಂಡಿಯಾ ಇಂದು ಮುಂಬೈನ ಬ್ರೇಬೊರ್ನ್ ಕ್ರೀಡಾಂಗಣದಲ್ಲಿ ನಾಲ್ಕನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ.
ಮೊನ್ನೆ ಪುಣೆ ಅಂಗಳದಲ್ಲಿ 43 ರನ್‍ಗಳ ಅಂತರದಿಂದ ಸೋತ ಕೊಹ್ಲಿ ಪಡೆ ಇದೀಗ ಸೋಲಿನ ಕಹಿಯನ್ನ ಮರೆಯಲು ಗೆಲುವಿನ ಹುಡುಕಾಟದಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಇದೇ ಪ್ರದರ್ಶನವನ್ನ ಮುಂದುವರೆಸಲು ನಿರ್ಧರಿಸಿದೆ.
ತಂಡದಲ್ಲಿ ಬ್ಯಾಲೆನ್ಸ್ ಮಾಡಬೇಕು ಭಾರತ
ಮೊನ್ನೆ ಪುಣೆ ಅಂಗಳದಲ್ಲಿ ಐದು ಬೌಲರ್‍ಗಳನ್ನ ಕಣಕ್ಕಿಳಿಸಿದ್ದು ನಾಯಕ ಕೊಹ್ಲಿಗೆ ಯಾವುದೇ ಪ್ರಯೋಜನಾವಾಗಲಿಲ್ಲ. ಇದೀಗ ಕೊಹ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸರಿಯಾದ ತಂಡದನ್ನ ಬ್ಯಾಲೆನ್ಸ್ ಮಾಡಲು ಹೊರಟಿದ್ದಾರೆ.
ಮೊನ್ನೆ ಮೂರನೇ ಏಕದಿನ ಪಂದ್ಯದಲ್ಲಿ ತಂಡ ಸೋಲಲು ಕಾರಣವಾಗಿದ್ದು ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು. ಮಧ್ಯಮ ಕ್ರಮಾಂಕದಲ್ಲಿ ಬಂದ ಅಂಬಾಟಿ ರಾಯ್ಡು, ಧೋನಿ, ರಿಷಭ್ ಪಂತ್ ಬೇಗನೆ ಪೆವಿಲಿಯನ್ ಸೇರಿದ್ರು. ಮಾಜಿ ನಾಯಕ ಧೋನಿ ಮತ್ತೆ ಮತ್ತೆ ವೈಫಲ್ಯ ಅನುಭವಿಸಿತ್ತಿರೋದು ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಮುಂಬರುವ ವಿಶ್ವಕಪ್‍ನಲ್ಲಿ ಆಡಬೇಕಿದ್ದಲ್ಲಿ ಧೋನಿ ಈ ಪಂದ್ಯಗಳಲ್ಲಿ ಅಬ್ಬರಿಸಬೇಕಿದೆ. ಇಲ್ಲದಿದ್ದಲ್ಲಿ ಏಕದಿನ ಸರಣಿಯಿಂದಲೂ ಗೇಟ್ ಪಾಸ್ ಪಡೆಯುವ ದಿನಗಳು ದೂರವಿಲ್ಲ.
ಡೆತ್ ಓವರ್‍ನಲ್ಲಿ ಮಿಂಚಬೇಕು ಬೌಲರ್ಸ್‍ಗಳು
ವಿಂಡೀಸ್ ವಿರುದ್ಧ ಸೋಲಿಗೆ ಮತ್ತೊಂದು ಕಾರಣವೆಂದರೆ ಡೆತ್ ಓವರ್‍ನಲ್ಲಿ ಭಾರೀ ರನ್‍ಗಳನ್ನ ಬಿಟ್ಟು ಕೊಟ್ಟಿದ್ದು. 9ನೇ ವಿಕೆಟ್‍ಗೆ ಜೊತೆ ಗೂಡಿದ ಆಶ್ಲೆ ನರ್ಸ್ ಮತ್ತು ಕೆಮರ್ ರೋಚ್ 56 ರನ್‍ಗಳ ಜೊತೆಯಾಟ ನೀಡಿ ಪಂದ್ಯದ ಗತಿಯನ್ನೆ ಬದಲಿಸಿದ್ರು. ಡೆತ್ ಓವರ್‍ಗಳಲ್ಲಿ ಬುಮ್ರಾ, ಭುವನೇಶ್ವರ್ ಎಚ್ಚರಿಕಯಿಂದ ಬೌಲಿಂಗ್ ಮಾಡಬೇಕಿದೆ.
ಇನ್ನು ವೆಸ್ಟ್‍ಇಂಡೀಸ್ ತಂಡಕ್ಕೆ ತಂಡದ ಬ್ಯಾಟಿಂಗ್ ದೊಡ್ಡ ಶಕ್ತಿಯಾಗಿದ್ದಾರೆ. 300ಕ್ಕೂ ಹೆಚ್ಚು ರನ್‍ಗಳಿಸಿರುವ ಶಾಯಿ ಹೋಪ್, ಕೆಳ ಕ್ರಮಾಂಕದಲ್ಲಿ ಆಶ್ಲೆ ನರ್ಸ್ ಮತ್ತು ಕೆಮರ್ ರೋಚ್ ತಂಡದ ಸ್ಕೋರ್ ಹೆಚ್ಚಿಸುತ್ತಾ ಬಂದಿದ್ದಾರೆ.
—————————
ಶತಕ ಬಾರಿಸಿ ಸಂಗಕ್ಕಾರ ದಾಖಲೆ ಮುರಿಯುತ್ತಾರಾ ಕೊಹ್ಲಿ
ನಾಲ್ಕನೆ ಶತಕ ಬಾರಿಸಲು ಕ್ಯಾಪ್ಟನ್ ಕೊಹ್ಲಿ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ದಾಖಲೆಯನ್ನ ಸರಿಗಟ್ಟಲು ಸಜ್ಜಾಗಿದ್ದಾರೆ.
ಪ್ರತಿ ಪಂದ್ಯದಲ್ಲೂ ಶತಕಗಳನ್ನ ಬಾರಿಸಿ ದಾಖಲೆಗಳ ಮೇಲೆ ದಾಖಲೆ ಬರೆದು ಮಿಂಚುತ್ತಿರುವ ಕ್ಯಾಪ್ಟನ್ ಕೊಹ್ಲಿ ಈಗ ಮತ್ತೊಂದು ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ವಿಂಡೀಸ್ ವಿರುದ್ಧ ಕಳೆದ ಮೂರು ಪಂದ್ಯಗಳಲ್ಲಿ 140, 157 ಮತ್ತು 107 ರನ್‍ಗಳನ್ನ ಬಾರಿಸಿ ಹ್ಯಾಟ್ರಿಕ್ ಶತಕಗಳನ್ನ ಬಾರಿಸಿದ ಸಾಧನೆ ಮಾಡಿದ್ದಾರೆ.
ಇಂದು ವಿಂಡೀಸ್ ವಿರುದ್ಧವೂ ಶತಕ ಬಾರಿಸಿದ್ರೆ ಸರಣಿಯಲ್ಲಿ ನಾಲ್ಕನೆ ಶತಕವಾಗಲಿದೆ. ಈ ಹಿಂದೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ 2015ರ ವಿಶ್ವಕಪ್‍ನಲ್ಲಿ ಸತತ ನಾಲ್ಕು ಶತಕಗಳನ್ನ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನ ಕೊಹ್ಲಿ ಸರಿಗಟ್ಟುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.