ಜಮಖಂಡಿ: ಜಮಖಂಡಿಯಲ್ಲಿ ಶಾಸಕ ಆಗುವ ಮೊದಲೇ 30 ಕೋಟಿ ರು.ಗಳನ್ನು ಮೊದಲೇ ತರಿಸಿದ್ದು, ಶಾಸಕರಾದ ಬಳಿಕ ಇನ್ನಷ್ಟು ಕೆಲಸ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಜಮಖಂಡಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ಹಾಗೂ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಸಿದ್ದು ನ್ಯಾಮಗೌಡ ಅವರು ಹಿಂದಿನಿಂದಲೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದವರು.ಅವರ ಮಗ ಕೂಡ ಶಾಸಕರಾಗುವಮೊದಲೇ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ 39 ಕೋಟಿ ರು.ಗಳನ್ನು ಈಗಾಗಲೇ ಸರಕಾರದಿಂದ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದರು.
ಸಿದ್ದು ನ್ಯಾಮಗೌಡರು ಸ್ವಂತ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಮ್ಮ ಸಮ್ಮುಶ್ರ ಸರಕಾರ ಹಿಂದಿನಸರಕಾಗಳು ರೈತರ ಸಾಲಮನ್ನಾ ಮಾಡುವಲ್ಲಿ ಹೆಚ್ಚು ಮುತವರ್ಜಿ ವಹಿಸಿದೆ. 49 ಕೋಟಿ ರು.ಗಳ ಸಾಲಮನ್ನಾ ವನ್ನು ನಮ್ಮ ಸರಕಾರ ಮಾಡಿದೆ. ಆದರೆ ಬಿಜೆಪಿ ಇದರ ನಯಾಪೈಸೆಯ ಕೆಲಸ ಮಾಡಿಲ್ಲ.ಕೇಂದ್ರ ಸರಕಾರ ಸಾಲಮನ್ನಾ ಮಾಡುವ ಆಸಕ್ತಿ ತೋರದೇ ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದರು.
ಜನಖಂಡಿಯಲ್ಲಿ ವಿವಿಧೆಡೆ ಪಾದಯಾತ್ರೆ ನಡೆಸಿ, ಜನರಲ್ಲಿ ಮತಯಾಚನೆ ಮಾಡಿದರು.