ಬೆಂಗಳೂರು, ಅ.28-ಪೆÇಲೀಸ್ ಸಿಬ್ಬಂದಿಯೊಬ್ಬರು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ ಹಾಗೂ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿ ಸತ್ಯಕ್ಕೆ ದೂರುವಾದುದು, ಈ ವೀಡಿಯೋದಲ್ಲಿ ಇರುವ ವ್ಯಕ್ತಿ ಪೆÇಲೀಸ್ ಸಿಬ್ಬಂದಿ ಅಲ್ಲ ಎಂದು ಪಶ್ಚಿಮ ವಿಭಾಗದ ಪೆÇಲಿಸರು ಸ್ಪಷ್ಟನೆ ನೀಡಿದ್ದಾರೆ.
ಸಿಟಿ ಮಾರ್ಕೆಟ್ ಪೆÇಲೀಸ್ ಠಾಣೆಯ ಕಾನ್ಸ್ಸ್ಟೆಬಲ್ ಒಬ್ಬರು ಕೆ.ಆರ್.ಮಾರುಕಟ್ಟೆಯ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿರುವ ದೃಶ್ಯವಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಇದನ್ನು ಬೆಂಗಳೂರು ಪೆÇಲೀಸ್ ಟ್ವಿಟ್ಟರ್ಗೆ ಟ್ಯಾಗ್ ಮಾಡಿ, ಪ್ರತಿಕ್ರಿಯಿಸಿದ್ದಾರೆ. ಕೆಲವು ಮಾಧ್ಯಮಗಳು ಕೂಡ ಸುದ್ದಿಯನ್ನು ಪ್ರಕಟಿಸಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಉಪ ಪೆÇಲೀಸ್ ಆಯುಕ್ತರು, ಶೀಘ್ರವೇ ಈ ಕುರಿತು ವರದಿ ನೀಡುವಂತೆ ಸಹಾಯಕ ಪೆÇಲೀಸ್ ಆಯುಕ್ತರಿಗೆ ಸೂಚಿಸಿದ್ದರು.
ಅದರಂತೆ ವಿಚಾರಣೆ ನಡೆಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಹಣ್ಣು ವ್ಯಾಪಾರಿ ಇಸ್ಮಾಯಿಲ್ ಎಂಬವರು 10 ರೂ.ಹಣವನ್ನು ಖಾಸಗಿ ಸೆಕ್ಯೂರಿಟಿ ಚಂದ್ರಪ್ಪ ಅವರಿಗೆ ನೀಡುತ್ತಿರುವುದು ತಿಳಿದುಬಂದಿದೆ.
ಇದನ್ನು ಪೆÇಲೀಸ್ ಸಿಬ್ಬಂದಿ ಎಂದು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಉಪ ಪೆÇಲೀಸ್ ಆಯುಕ್ತರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪೆÇಲೀಸರು ಜನಸ್ನೇಹಿಗಳಾಗಿ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆÇಲೀಸರು ಹಫ್ತಾ ವಸೂಲಿ ಮಾಡುವುದು, ಯಾರಿಗಾದರೂ ಕಂಡುಬಂದಲ್ಲಿ ನೇರವಾಗಿ ಮೊಬೈಲ್ ಸಂಖ್ಯೆ 9480801701 ಅಥವಾ 080-22942356, ಪಶ್ಚಿಮ ವಿಭಾಗದ ನಿಯಂತ್ರಣ ಕೊಠಡಿ 9480801700, 080-22943232 ಸಂಖ್ಯೆಗಳಿಗೆ ಕರೆ ಮಾಡಬಹುದು ಅಥವಾ ವಾಟ್ಸಾಪ್ ಮಾಡಬಹುದು. ಹಣ ವಸೂಲಿ ಮಾಡುವ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.