ಬಿಜೆಪಿಗೆ ಸೇರ್ಪಡೆಯಾದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್

ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ ತಿರುವನಂತಪುರಂನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ನಾಯರ್ ಸೇರಿದ್ದಾರೆ. 2003- 2009ರವರೆಗೆ ಇಸ್ರೊ ಮುಖ್ಯಸ್ಥರಾಗಿದ್ದ ನಾಯರ್, ಭಾರತದ ಮೊದಲ ಚಂದ್ರಯಾನ 1 ಯೋಜನೆಯ ರೂವಾರಿಯಾಗಿದ್ದಾರೆ.ಇನ್‌‍ಸ್ಯಾಟ್, ಪಿಎಸ್‍ಎಲ್‍ವಿ ಮತ್ತು ಜಿಎಸ್ಎಲ್‍ವಿ ಸೇರಿದಂತೆ ಯಶಸ್ವಿ 25 ಯೋಜನೆಗಳಿಗೆ ನಾಯರ್ ನೇತೃತ್ವ ವಹಿಸಿದ್ದರು.

ಬಿಜೆಪಿ ಅನುಯಾಯಿಯಾಗಿದ್ದ ನಾಯರ್ ಆಂಟ್ರಿಕ್ಸ್- ದೆವಾಸ್ ಒಪ್ಪಂದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಒಪ್ಪಂದದಿಂದಾಗಿ ಖಜಾನೆಗೆ 578 ಕೋಟಿ ನಷ್ಟವುಂಟಾಗಿತ್ತು, ಫೆಬ್ರುವರಿ ತಿಂಗಳಲ್ಲಿ ನಾಯರ್ ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು.

ಮಾಧವನ್ ನಾಯರ್ ಜತೆ ಟ್ರಾವೆಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಜಿ, ರಾಮನ್ ನಾಯರ್, ಮಹಿಳಾ ಆಯೋಗದ ಮಾಜಿ ಸದಸ್ಯೆ ಡಾ. ಪ್ರಮೀಳಾ ದೇವಿ,ಕರ್ನಾಕುಳಂ ಜೆಡಿಎಸ್ , ಜಿಲ್ಲಾ ಉಪಾಧ್ಯಕ್ಷ ದಿವಾಕರನ್ ನಾಯರ್ ಮತ್ತು ಮಲಂಕರ ಕ್ರೈಸ್ತ ದೇವಾಲಯದ ಥಾಮಸ್ ಜಾನ್ ಬಿಜೆಪಿಗೆ ಸೇರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ