ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅತಿಥಿಯಾಗಿ ಬರಲು ನಿರಾಕರಿಸಿದ ಡೊನಾಲ್ಡ್ ಟ್ರಂಪ್

Varta Mitra News

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಬರಬೇಕೆಂಬ ಭಾರತದ ಆಮಂತ್ರಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಭಾರತ ಭೇಟಿ ನೀಡುವ ಕುರಿತು ಟ್ರಂಪ್​ ಅವರಿಗೆ ಆಮಂತ್ರಣ ಬಂದಿರುವುದು ನನಗೆ ತಿಳಿದಿದೆ. ಆದರೆ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ವೈಟ್​ಹೌಸ್​ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್​ ಆಗಸ್ಟ್​ನಲ್ಲಿ ತಿಳಿಸಿದ್ದರು.ಆದರೆ ಈ ಕುರಿತು ವಿದೇಶಾಂಗ ಸಚಿವಾಲಯ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಈ ಕುರಿತು ಪ್ರತಿಕ್ರಿಯಿಸಿದ್ದು, ವೈಟ್​ಹೌಸ್​ಗೆ ಮಾತ್ರ ಅಧ್ಯಕ್ಷರ ಪ್ರವಾಸದ ಯೋಜನೆ ಬಗ್ಗೆ ಮಾಹಿತಿ ತಿಳಿದಿರುತ್ತದೆ ಎಂದಿದೆ.

ಟ್ರಂಪ್​ರ ಚಳಿಗಾಲದ ಪ್ರವಾಸ ವೇಳಾಪಟ್ಟಿ ಈಗಾಗಲೇ ಸಿದ್ಧವಾಗಿದ್ದು, ಈ ವೇಳಾಪಟ್ಟಿಯ ಪ್ರಕಾರ ಟ್ರಂಪ್​ ಭಾರತಕ್ಕೆ ಭೇಟಿ ನೀಡುತ್ತಿಲ್ಲ ಎಂದು ಅಮೆರಿಕ ಅಧಿಕಾರಿಗಳ ಮೂಲಗಳು ತಿಳಿಸಿವೆ.

2019ರ ಗಣರಾಜ್ಯೋತ್ಸವಕ್ಕೆ ಆಗಮಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಕಳೆದ ಏಪ್ರಿಲ್ ನಲ್ಲಿಯೇ ಆಹ್ವಾನಪತ್ರ ನೀಡಿತ್ತು. ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ವಿಶ್ವದ ವಿವಿಧ ರಾಷ್ಟ್ರಗಳ ಗಣ್ಯರು ಮುಖ್ಯ ಅತಿಥಿಗಳಿ ಆಗಮಿಸುವುದು ವಾಡಿಕೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ