ಕಾಂಗ್ರೆಸ್ ನಿಂದ ವಂಚನೆಗೊಳಗಾದವರಿಂದ ಶೀಘ್ರ ಮೀ ಟೂ ಅಭಿಯಾನ: ರಾಜನಾಥ್ ಸಿಂಗ್

ನವದೆಹಲಿ: ಕಾಂಗ್ರೆಸ್ ನಿಂದ ವಂಚನೆಗೊಳಗಾಗಿರುವವರು ಶೀಘ್ರದಲ್ಲೇ #MeToo ಅಭಿಯಾನ ಆರಂಭಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿರುವವರು ಹಾಗೂ ಕಾಂಗ್ರೆಸ್ ಜತೆ ಕೈಜೋಡಿಸುತ್ತಿರುವವರ ವಿರುದ್ಧ ವ್ಯಂಗ್ಯವಾಡಿರುವ ರಾಜನಾಥ್ ಸಿಂಗ್, ಕಾಂಗ್ರೆಸ್ ಪಕ್ಷ ಸೇರುತ್ತಿರುವವರನ್ನು ಯಾರೂ ರಕ್ಷಿಸು ಸಾಧ್ಯವಿಲ್ಲ. ಆದರೆ ಕೊನೆಯಲ್ಲಿ ಕಾಂಗ್ರೆಸ್ ನಿಂದ ವಂಚನೆಗೊಳಗಾದವರು #MeToo ಅಭಿಯಾನ ಪ್ರಾರಂಭಿಸಬೇಕಾಗುತದೆ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಾಜಿ ಕೇಂದ್ರ ಸಚಿವ ಬಿಜೆಪಿ ನಾಯಕರಾಗಿದ್ದ ಜಸ್ವಂತ್ ಸಿನ್ಹಾ ಪುತ್ರ ಮನ್ವೀಂದರ್ ಸಿನ್ಹಾ ಹಾಗೂ ಮಹಾರಾಷ್ಟ್ರದ ಮಾಜಿ ಬಿಜೆಪಿ ಶಾಸಕ ಆಶಿಶ್ ದೇಶ್ಮುಖ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ