ನೊಯ್ಡಾ: ಮೂರು ವರ್ಷದ ಮಗುವಿನ ಮೇಲೆ ಖಾಸಗಿ ಶಾಲೆಯ ಬಸ್ ಚಾಲಕ ಅತ್ಯಾಚಾರ ಎಸಗಿರುವ ಘೋರ ಘಟನೆ ಬೆಳಕಿಗೆ ಬಂದಿದೆ.
ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ವಿರುದ್ಧ ಪೊಕ್ಸೊ ಮತ್ತು ಐಪಿಸಿ ಸೆಕ್ಷನ್ 376ಎ, 376ಬಿ ಅಡಿ ಪ್ರಕರಣ ದಾಖಲಿಸಿಳ್ಳಲಾಗಿದ್ದು, ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಮಗಳನ್ನ ಬಸ್ ನಿಲ್ದಾಣದಿಂದ ಕರೆದುಕೊಂಡು ಬರಲು ತೆರಳಿದ್ದ ಬಾಲಕಿಯ ತಂದೆಗೆ ವಿಷಯ ತಿಳಿದು ಬಂದಿದೆ. ಅಪ್ಪನನ್ನು ನೋಡಿದ ಕೂಡಲೇ ಬಾಲಕಿ ಜೋರಾಗಿ ಅಳಲಾರಂಭಿಸಿದ್ದಾಳೆ. ವಿಚಾರಣೆ ನಡೆಸಿದಾಗ, ಬಸ್ ಚಾಲಕ ಮಗುವಿನ ಒಳ ಉಡುಪುಗಳನ್ನು ತೆಗೆದು, ಆಕೆಯನ್ನು ಅನುಚಿತವಾಗಿ ನಡೆಸಿಕೊಂಡಿರುವುದರ ಬಗ್ಗೆ ಅಪ್ಪನ ಬಳಿ ಮಗು ಹೇಳಿಕೊಂಡಿದ್ದಾಳೆ.
ವೃತ್ತಿಯಲ್ಲಿ ವಕೀಲೆಯಾಗಿರುವ ಬಾಲಕಿಯ ತಾಯಿ ಈ ಕುರಿತು ವಿಚಾರಿಸಿದಾಗ, ಅಮ್ಮನ ಬಳಿಯೂ ಘಟನೆಯನ್ನು ವಿವರಿಸಿದ್ದಾಳೆ. ಅಲ್ಲದೇ ಘಟನೆ ಬಗ್ಗೆ ಯಾರಬಳಿಯೂ ಹೇಳಿಬಾರದು, ಹೇಳಿದರೆ ಹೊಡೆಯುವುದಾಗಿ ಚಾಲಕ ಹೆದರಿಸಿದ್ದಾಗಿಯೂ ಮಗು ಹೇಳಿಕೊಂಡಿದೆ.
ಘಟನೆಯಿಂದ ಕಂಗಾಲಾಗಿರುವ ಪಾಲಕರು ಶಾಲೆಗೆ ತೆರಳಿ ಚಾಲಕನ ಬಗ್ಗೆ ವಿಚಾರಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿ 15 ದಿನಗಳಾಗಿದ್ದರೂ ಇನ್ನೂ ಚಾಲಕ ಪತ್ತೆಯಾಗಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿ, ಕ್ರಮಕ್ಕೆ ಮುಂದಾಗದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.