ಜಮ್ಮು ಕಾಶ್ಮೀರದ ನೌಗಾಂನಲ್ಲಿ ಗ್ರೇನೆಡ್ ದಾಳಿ: ಸಿಐಎಸ್​ಎಫ್ ಅಧಿಕಾರಿ ಹುತಾತ್ಮ

ನೌಗಾಂ: ಜಮ್ಮು ಕಾಶ್ಮೀರದ ನೌಗಾಂನಲ್ಲಿ ಉಗ್ರರು ನಡೆಸಿದ ಗ್ರೆನೇಡ್​ ದಾಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್​ಎಫ್​) ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಹುತಾತ್ಮರಾಗಿದ್ದಾರೆ

ಮೃತ ಸಿಐಎಸ್​ಎಫ್​ ಅಧಿಕಾರಿಯನ್ನು ರಾಜೇಶ್​ ಕುಮಾರ್​ ಎಂದು ಗುರುತಿಸಲಾಗಿದೆ. ಇವರನ್ನು ವಾಗೋರಾದಲ್ಲಿ ಕರ್ತವ್ಯಕ್ಕಾಗಿ ನಿನ್ನೆ ರಾತ್ರಿ ನಿಯೋಜಿಸಲಾಗಿತ್ತು. ಈ ವೇಳೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ರಾಜೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಹುತಾತ್ಮರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ