ಬಿಎಂಟಿಎಫ್ ಸಂಸ್ಥೆ ಬಂದ್ ಮಾಡಿ; ಸಿಎಸ್‍ಎಫ್ ಸಂಸ್ಥೆ ರಚನೆಗೆ ಮುಂದಾದ ರಾಜ್ಯ ಸರ್ಕಾರ

Varta Mitra News

ಬೆಂಗಳೂರು, ಅ.27- ಬಿಎಂಟಿಎಫ್ ಸಂಸ್ಥೆಯನ್ನು ಮುಚ್ಚಿ ಕಾಪೆರ್Çರೇಷನ್ ಸೆಕ್ಯೂರಿಟಿ ಫೆÇೀರ್ಸ್ (ಸಿಎಸ್‍ಎಫ್) ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಹೊಸ ಸಂಸ್ಥೆ ನವೆಂಬರ್‍ನಿಂದ ಕಾರ್ಯಾಚರಣೆಗಿಳಿಯುವ ಸಾಧ್ಯತೆ ಇದೆ. ಸಿಎಸ್‍ಎಫ್‍ಗೆ ಬಿಎಂಟಿಎಫ್ ಪೆÇಲೀಸರಂತೆ ಭ್ರಷ್ಟರ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರವಿರುವುದಿಲ್ಲ. ಅದೇ ರೀತಿ ಬಿಡಿಎ, ಬಿಡಬ್ಲ್ಯೂಎಸ್‍ಎಸ್‍ಬಿ, ಕೆಐಎಡಿಬಿ ಮತ್ತಿತರ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧವೂ ಸಿಎಸ್‍ಎಫ್ ದೂರು ದಾಖಲಿಸಿಕೊಳ್ಳುವಂತಿಲ್ಲ.

ಈ ಹೊಸ ಸಂಸ್ಥೆಗೆ ಬಿಬಿಎಂಪಿ ಆಯುಕ್ತರೇ ಮುಖ್ಯಸ್ಥರಾಗಿರುವುದರಿಂದ ಸಿಎಸ್‍ಎಫ್ ಅಧಿಕಾರಿಗಳು ಕೆಎಂಸಿ ಮತ್ತು ಕೆಎಲ್‍ಆರ್ ಕಾಯ್ದೆಗಳಡಿಯಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕಾಗುತ್ತದೆ.
ಸಿಎಸ್‍ಎಫ್ ಸಂಸ್ಥೆ ಹುಟ್ಟುಹಾಕುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಎಂಟಿಎಫ್ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ