ದೊಡ್ದಬಳ್ಳಾಪುರ: ಸ್ವತಂತ್ರವಾಗಿ ಸಂಚರಿಸಲು ಉದ್ಯೋಗ ಮಾಡಲು ವಸ್ತುಗಳನ್ನು ಮಾರಾಟ ಮಾಡಲು ನಿರ್ಬಂಧ ಹೇರುವುದು ವೇತನ ನಿರಾಕರಣೆ ಮಾಡುವುದು ಈ ನಾಲ್ಕು ಅಂಶಗಳು ಜೀತ ನಿರ್ಮೂಲನ ಕಾಯ್ದೆ ಪ್ರಕರಣದಲ್ಲಿ ಅರ್ಹಗೊಳ್ಳುತ್ತದೆ ಎಂದು ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ (ಐಜೆಎಂ) ಸಂಸ್ಥೆಯ ನಿರ್ದೇಶಕಿ ಪ್ರತಿಮಾ ಹೇಳಿದರು
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಐಜೆಎಂ ಸಂಸ್ಥೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪತ್ರಕರ್ತರಿಗಾಗಿ ಜೀತ ಕಾರ್ಮಿಕ ಪದ್ಧತಿ ಹಾಗೂ ಕಳ್ಳ ಸಾಗಣೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ
ಜೀತ ಕಾರ್ಮಿಕ ಪದ್ಧತಿ ಎಂದರೆ ಸಾಲಬಾಧೆಯಿಂದಾಗಿ ಅಥವಾ ಇನ್ನಿತರೆ ಅನಿವಾರ್ಯತೆಯಿಂದಾಗಿ ಭಾರತದ ಸಂವಿಧಾನ ಖಾತ್ರಿ ಪಡಿಸಿರುವ ಹಲವು ನಿರ್ದೀಷ್ಟವಾದ ಮೂಲಭೂತ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಒತ್ತೆ ಇಡುವಂತಹ ಕ್ರೂರ ಪದ್ಧತಿ ಶಾರೀರಿಕ ದೌರ್ಜನ್ಯ, ನಿಂದನೆ, ಬಲವಂತ ಹಾಗೂ ಲೈಂಗಿಕ ನಿಂದನೆಯಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿವೆ ಇದರಿಂದಾಗಿ ಇದೊಂದು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ
ಬೆಂಗಳೂರು ನಗರ ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಒಟ್ಟು ಕಾರ್ಮಿಕರ ಸಂಖ್ಯೆ 1,670,734 ಇದರಲ್ಲಿ ಶೇಕಾಡ 33.4% ಜೀತ ಕಾರ್ಮಿಕರು ಇದ್ದಾರೆ ಅಂದರೆ ಮೂರು ಜಿಲ್ಲೆಗಳಲ್ಲಿಯೇ 558,334 ಜೀತ ಕಾರ್ಮಿಕರಿದ್ದಾರೆ ಎಂದರು
ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ಮಾತನಾಡಿ 2014ರಲ್ಲಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯದಲ್ಲಿದ್ದಾಗ ಚನ್ನರಾಯಪಟ್ಟಣದ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ರಮೇಶ್ ಅನ್ನುವ ವ್ಯಕ್ತಿಯನ್ನು ರಕ್ಷಣೆ ಮಾಡಿ ಮಾಲೀಕನನ್ನು ಭಾರತೀಯ ದಂಡ ಸಂಹಿತೆ ಕಾಯ್ದೆ 370ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು ಎಂದರು
ಉಪತಹಸಿಲ್ದಾರ್ ರಾಜು ಲೋಚನ್ ಮಾತನಾಡಿ ಜೀತ ಪದ್ಧತಿ ಕಾಯ್ದೆ 1976 ರ ಪ್ರಕಾರ ಒಮ್ಮೆ ಜೀತ ಕಾರ್ಮಿಕನನ್ನು ಗುರುತಿಸಿ ಅವರನ್ನು ವಿಚಾರಣೆ ಮಾಡಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಡುಗಡೆ ಪ್ರಮಾಣ ಪತ್ರವನ್ನು ನೀಡಿದ ತಕ್ಷಣ ಅವರು ಎಲ್ಲಾ ರೀತಿಯ ಋಣ ಭಾದೆಯಿಂದ ಮುಕ್ತರಾಗುತ್ತಾರೆ ತಾವು ಪಡೆದುಕೊಂಡಿರುವ ಸಾಲದ ಮರುಪಾವತಿಗೆ ಅವರು ಹೊಣೆಗಾರರಾಗುವುದಿಲ್ಲ ಕಾರ್ಮೀಕರನ್ನು ಜೀತಕ್ಕಿಟ್ಟುಕೊಂಡ ವ್ಯಕ್ತಿಯನ್ನು ಬಂಧಿಸಿ ಅಂತಹ ವ್ಯಕ್ತಿಗೆ ಗರಿಷ್ಟ 3 ವರ್ಷ ಜೈಲು ಮತ್ತು 2 ಸಾವಿರ ರೂಪಾಯಿಗಳನ್ನು ದಂಡವನ್ನು ವಿಧಿಸಲಾಗುತ್ತದೆ ಇನ್ನು ಮಾನವ ಕಳ್ಳ ಸಾಗಣೆ ಕೂಡ ಜಾಮೀನು ರಹಿತ ಅಪರಾಧವಾಗಿದೆ ಇಂತ ಅಪರಾಧಕ್ಕೆ ಏಳು ವರ್ಷಗಳ ಶಿಕ್ಷೆ ಇದೆ ಅಪ್ರಾಪ್ತರನ್ನು ಜೀತಕ್ಕೆ ಇಟ್ಟು ಕೊಂಡರೆ ಅವರಿಗೆ ಜೀವಾವಧಿ ಶಿಕ್ಷೆ ಇದೆ ಎಂದರು ಐಜೆಎಂ ನ ನಿರ್ದೇಶಕ ಬಿಲಿಯಾಸ್ ಮಾತನಾಡಿ ಜನ ಸಾಮಾನ್ಯರ ಜೊತೆ ಸದಾ ಸಂಪರ್ಕದಲ್ಲಿರುವ ಪತ್ರಕರ್ತರಿಗೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೆ ಮಾಹಿತಿ ನೀಡಿ ಈ ಜೀತ ಪದ್ಧತಿ ಹಾಗೂ ಕಳ್ಳ ಸಾಗಣೆ ಪಿಡುಗನ್ನು ದೇಶದಿಂದ ತೊಲಗಿಸಬೇಕು ಇಂತಹ ಪ್ರಕರಣಗಳು ಕಂಡು ಬರುವುದು ಇಟ್ಟಿಗೆ ಕಾರ್ಖಾನೆ, ಪ್ಲಾಸ್ಟೀಕ್ ಕಾರ್ಖಾನೆ, ತೋಟದ ಮನೆಗಳಲ್ಲಿ , ಕಲ್ಲು ಕ್ವಾರಿ, ಹಾಗೂ ಗಾರ್ಮೆಂಟ್ಸ್ ಗಳಲ್ಲಿ ಅತಿ ಹೆಚ್ಚು ಕಂಡು ಬರುತ್ತಿವೆ ಎಂದರು
ಈ ಕಾರ್ಯಗಾರದಲ್ಲಿ ಐಜೆಎಂ ನ ಕಮ್ಯೂನಿಕೇಷನ್ ಮ್ಯಾನೇಜರ್ ಆದ ಜೋಸೆಪ್ ಮಿಡಿಯಾ ಕೋಆರ್ಡಿನೇಟರ್ ಆದ ಗಾಯತ್ರಿ, ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಮೌಳೇಶ್ವರ ಸ್ವಾಮಿ, ಮತ್ತು ರಕ್ಷಣೆಗೊಳಗಾದ ರಮೇಶ್ ಹಾಗೂ ಪತ್ರಕರ್ತರು ಭಾಗವಹಿಸಿದ್ದರು.