ನಮ್ಮಲ್ಲಿ ಸಾಫ್ಟ್ ಹಿಂದುತ್ವ,ಹಾರ್ಡ್‌ ಹಿಂದುತ್ವ ಅಂತ ಏನಿಲ್ಲ !

ಶಿವಮೊಗ್ಗ: ನಮ್ಮಲ್ಲಿ ಸಾಫ್ಟ್ ಹಿಂದುತ್ವ, ಹಾರ್ಡ್ ಹಿಂದುತ್ವ ಅಂತ ಏನು ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು. ನಾನೂ ಹಿಂದು, ಯಡಿಯೂರಪ್ಪನೂ ಹಿಂದು, ನಮ್ಮಿಬ್ಬರಲ್ಲಿ ಏನು ವ್ಯತ್ಯಾಸವಿದೆ ಎಂದರು.

ಕರಾವಳಿಯನ್ನು ಬಿಜೆಪಿಯವರು ಹಿಂದುತ್ವದ ಲ್ಯಾಬೋರೆಟರಿ ಮಾಡಿಕೊಂಡಿದ್ದರು. ಅಪಪ್ರಚಾರ ಮಾಡಿದ ಕಾರಣ ನಮಗೆ ಹಿನ್ನಡೆಯಾಯಿತು. ಈಗ ನಾವು ಅಪಪ್ರಚಾರವನ್ನು ತಡೆದಿದ್ದೇವೆ. ನಮ್ಮ ಗೆಲುವು ನಿಶ್ಚಿತ ಎಂದರು.

ಉಪಚುನಾವಣೆಯಲ್ಲಿ ಹಿಂದುತ್ವದ ವಿಚಾರದಲ್ಲಿ ಅಪಪ್ರಚಾರವನ್ನು ನಾವು ತಡೆದಿದ್ದು, ಬಿಜೆಪಿಯನ್ನು ಸೋಲಿಸಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ