ತಮಿಳು ಚಿನ್ನಮ್ಮಗೆ ಕನ್ನಡದ ಮೇಲೆ ಪ್ರೀತಿ; ದೂರ ಶಿಕ್ಷಣದಿಂದ ಕನ್ನಡ ಸ್ನಾತಕೋತ್ತರ ಪದವಿ ಕಲಿಯಲಿದ್ದಾರೆ ಶಶಿಕಲಾ, ಇಳವರಸಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿಯಾಗಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ವಿ.ಕೆ. ಶಶಿಕಲಾ ಮತ್ತು ಇಳವರಸಿ ಅವರಿಗೆ ಕನ್ನಡ ಕಲಿಯೋ ಆಸೆ ಉಂಟಾಗಿದೆ.
ಜೈಲಿನಲ್ಲಿದ್ದುಕೊಂಡೇ ಕನ್ನಡ ಸ್ನಾತಕೋತ್ತರ ಪದವಿ ಪಡೆಯುವ ಬಯಕೆಯನ್ನು ಶಶಿಕಲಾ ಮತ್ತು ಇಳವರಸಿ ಜೈಲಿನ ಸಿಬ್ಬಂದಿ ಬಳಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ವಿವಿ ಸಿಬ್ಬಂದಿ ಜೊತೆಗೆ ಜೈಲಿನ ಅಧಿಕಾರಿಗಳು ಮಾತನಾಡಿದ್ದು, ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ನೀಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ವಿವಿಯ ಸಿಬ್ಬಂದಿ ವಿ.ಕೆ.ಶಶಿಕಲಾ ಮತ್ತು ಇಳವರಸಿ ಅವರನ್ನು ಸ್ನಾತಕೋತ್ತರ ಪದವಿಗೆ ದಾಖಲಾತಿ ಮಾಡಿಕೊಂಡಿದ್ದಾರೆ. ದಾಖಲಾತಿ ಆದ ನಂತರ ಶಶಿಕಲಾ ಅಭ್ಯಾಸವನ್ನು ಶುರು ಮಾಡಿದ್ದು, ಕನ್ನಡ ಅಕ್ಷರಮಾಲೆ ಹಾಗೂ ಕಾಗುಣಿತವನ್ನು ಕಲಿಯುತ್ತಿದ್ದಾರೆ. ಸಹ ಕೈದಿಗಳ ಜೊತೆಗೂ ಕನ್ನಡದಲ್ಲಿ ಮಾತನಾಡುತ್ತಿರುವ ಶಶಿಕಲಾ, ನಾಲ್ಕು ವರ್ಷದ ಶಿಕ್ಷೆಯ ಅವಧಿಯ ನಡುವೆ ಪೂರ್ಣ ಪ್ರಮಾಣದ ಕನ್ನಡ ಕಲಿಯುವ ಇಚ್ಛೆಯನ್ನು ಚಿನ್ನಮ್ಮ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಿಯುವ ಚಿನ್ನಮ್ಮನ ಆಸೆಗೆ ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗ ಹಾಗೂ ಜೈಲಿನ ಅಧಿಕಾರಿಗಳ ಸಹಕಾರ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ