ಹೈದರಾಬಾದ್: ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ಯುವಕನೊಬ್ಬ ಚಾಕು ಇರಿದಿರುವ ಘಟನೆ ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಂದ ಯುವಕ ಜಗನ್ ಜೊತೆ ಮಾತನಾಡಿ, ಒಂದು ವೇಳೆ ಮುಂದಿನ ವಿದಾನಸಭೆ ಚುನಾವಣೆಯಲ್ಲಿ 168 ಸೀಟು ಗೆದ್ದರೆ ಏನು ಮಾಡುತ್ತೀರಿ ಎಂದು ಕೇಳಿದ್ದಾನೆ. ನಂತರ ಸೆಲ್ಫಿ ತೆಗೆದುಕೊಂಡ ಬಳಿಕ ಏಕಾಏಕಿ ಚಾಕುವಿನಿಂದ ಜಗನ್ ಎಡ ಭುಜಕ್ಕೆ ಇರಿದ್ದಾನೆ.
ಜಗನ್ ಭೂಜಕ್ಕೆ ಸಣ್ಣ ಪ್ರಮಾಣ ಗಾಯವಾಗಿದ್ದು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಜಗನ್ ಜತೆಗೇ ಇದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.