ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ 81 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಪಾತ್ರರಾದ್ರು.
ಇದರೊಂದಿಗೆ ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಅಳಿಸಿ ಹಾಕಿದ್ರು. ಸಚಿನ್ ತೆಂಡೂಲ್ಕರ್ 2001ರಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಮದ್ಯದಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಇದೀಗ 18 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ರು.
ವಿರಾಟ್ ಕೊಹ್ಲಿ ಹತ್ತು ಸಾವಿರ ರನ್ ಪೂರೈಸಲು 205 ಇನ್ನಿಂಗ್ಸ್ ತೆಗೆದುಕೊಂಡ್ರು. ಸಚಿನ್ ತೆಂಡೂಲ್ಕರ್ ಹತ್ತು ಸಾವಿರ ರನ್ ಪೂರೈಸಲು 259 ಇನ್ನಿಂಗ್ಸ್ ತೆಗೆದುಕೊಂಡಿದ್ರು.
ಈ ದಾಖಲೆಯೊಂದಿಗೆ ವಿರಾಟ್ ಕೊಹ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 13ನೇ ಬ್ಯಾಟ್ಸ್ಮನ್ ಹಾಗೂ 5ನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಗೌರವಕ್ಕೂ ಪಾತ್ರರಾದ್ರು.