ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರಗಳು

ಬೆಂಗಳೂರು, ಅ.25- ರಿಯಲ್‍ಎಸ್ಟೇಟ್ ಹೆಸರಿನಲ್ಲಿಜನ ಸಾಮಾನ್ಯರಿಗಾಗುತ್ತಿರುವ ಶೋಷಣೆಯನ್ನುತಪ್ಪಿಸಲು ಮತ್ತುಕಾರಾರುವಕ್ಕಾದದಾಖಲೆ ಪತ್ರಗಳನ್ನು ನಿರ್ವಹಣೆ ಮಾಡಲು ಅನುಕೂಲವಾಗುವಂತೆರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಆಧಾರಿತ ಆಸ್ತಿ ಮಾಹಿತಿ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಹಕಾರ ಸಚಿವ ಬಂಡೆಪ್ಪಕಾಶೆಂಪೂರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಭೌಗೋಳಿಕ ಮಾಹಿತಿ ವ್ಯವಸ್ಥೆ (ಉeogಡಿಚಿಠಿhiಛಿಚಿಟ Iಟಿಜಿoಡಿmಚಿಣioಟಿ Sಥಿsಣem)ಆಧಾರಿತ ಆಸ್ತಿ ಮಾಹಿತಿಯಿಂದದಾಖಲೆ ಪತ್ರಗಳ ಖಚಿತತೆಯಗೊಂದಲ ನಿವಾರಣೆಯಾಗಲಿದೆಎಂದರು.

ರಾಜ್ಯದ ನಗರ ಪ್ರದೇಶಗಳಲ್ಲಿ ಹೊಸದಾಗಿ 250 ಅಂಗನವಾಡಿ ಕೇಂದ್ರಗಳನ್ನು 17.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆನುಮೋದನೆ ನೀಡಲಾಗಿದೆಎಂದುಅವರು ತಿಳಿಸಿದರು.

ಬಜೆಟ್‍ನಲ್ಲಿ ಘೋಷಿಸಿದಂತೆ ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನುರಾಜ್ಯದಲ್ಲಿ ಪೆÇ್ರೀತ್ಸಾಹಿಸಲು ರೈತರಿಗೆತರಬೇತಿ ಶಿಬಿರಗಳನ್ನು ಆಯೋಜಿಸುವುದು ಸೇರಿದಂತೆಇನ್ನಿತರ ಕಾರ್ಯಕ್ರಮಗಳಿಗಾಗಿ 50 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿತೀರ್ಮಾನಿಸಲಾಗಿದೆಎಂದು ಬಂಡೆಪ್ಪಕಾಶೆಂಪೂರ್ ಹೇಳಿದರು.

ಭಡ್ತಿ ಮೀಸಲಾತಿಕಾಯ್ದೆ ಬಗ್ಗೆ ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೆಚ್ಚು ಚರ್ಚೆ ಮಾಡಿದರು. ಮುಖ್ಯಮಂತ್ರಿ ಸೇರಿದಂತೆಎಲ್ಲ ಸಚಿವರು ಈ ಬಗ್ಗೆ ಗಮನ ಹರಿಸಿದ್ದೇವೆ. ಸುಪ್ರೀಂಕೋರ್ಟ್‍ನಲ್ಲಿ ಸತತ ಮೂರು ದಿನಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆಎಂದುಅವರು ತಿಳಿಸಿದರು.

ದಕ್ಷಿಣಕನ್ನಡಜಿಲ್ಲೆಯ ಕುಳಾಯಿಯಲ್ಲಿ 196.51 ಕೋಟಿರೂ.ಅಂದಾಜು ಮೊತ್ತದಲ್ಲಿ ಮೀನುಗಾರಿಕೆ ಬಂದರನ್ನು ನಿರ್ಮಿಸುವಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕೇಂದ್ರ ಸರಕಾರದಿಂದ ಶೇ.50ರಷ್ಟು(98.25 ಕೋಟಿರೂ.), ನವ ಮಂಗಳೂರು ಬಂದರು ನಿಗಮದಿಂದ ಶೇ.45ರಷ್ಟು(88.43 ಕೋಟಿರೂ.) ಹಾಗೂ ರಾಜ್ಯ ಸರಕಾರದಿಂದ ಶೇ.5ರಷ್ಟು(9.82 ಕೋಟಿರೂ.) ಪಾಲುದಾರಿಕೆಯೊಂದಿಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದುಅವರು ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಹಿಳಾ ಸದಸ್ಯರೊಬ್ಬರನ್ನು ನೇಮಕ ಮಾಡಲುತೀರ್ಮಾನಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಆವರಣದಲ್ಲಿ 450 ಹಾಸಿಗೆಗಳ ಸಾಮಥ್ರ್ಯದಆಸ್ಪತ್ರೆಯನ್ನು 141.20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಎಂದುಅವರು ತಿಳಿಸಿದರು.
ರಾಜ್ಯ ವಿಧಾನಸಭೆಯಅಧಿವೇಶನವನ್ನುಡಿಸೆಂಬರ್ ತಿಂಗಳಿನಲ್ಲಿ ಕರೆಯಲು ನಿರ್ಧರಿಸಲಾಗಿದ್ದು, ದಿನಾಂಕ ಹಾಗೂ ಎಷ್ಟು ದಿನಗಳ ಅಧಿವೇಶನ ನಡೆಸ ಬೇಕೆಂಬುದರ ಬಗ್ಗೆ ಇನ್ನೂಯಾವುದೇತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಬಂಡೆಪ್ಪಕಾಶೆಂಪೂರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ