ಬೆಂಗಳೂರು, ಅ.25- ಮಹಿಳೆಯರಿಗೆ ಸಿನಿಮಾರಂಗದಲ್ಲೂ ಸಮಾನ ಗೌರವ ಸಿಗುವಂತಾಗಬೇಕು. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಅಭಿಯಾನವೇ ಹೊರತು ಪುರುಷರ ವಿರುದ್ಧ ಅಲ್ಲ ಎಂದು ಹಿರಿಯ ವಕೀಲರಾದ ಹೇಮಲತಾ ಮಹಿಷಿ ಇಂದಿಲ್ಲಿ ಅಭಿಪ್ರಾಯಪಟ್ಟರು.
ನಗರದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘ ಮೀ ಟೂ ಅಭಿಯಾನ ಮಹಿಳೆಯರ ಘನತೆ, ಭದ್ರತೆಗೆ ಆಗ್ರಹಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇತರೆ ರಂಗಗಳಲ್ಲಿ ಮಹಿಳೆಯರಿಗೆ ಗೌರವ ಸಿಗುವ ರೀತಿಯಲ್ಲೇ ಚಿತ್ರರಂಗದಲ್ಲೂ ಸಿಗಬೇಕು. ಮಹಿಳೆಯರ ನಿರ್ಲಕ್ಷ್ಯ ಬೇಡ ಎಂದು ಹೇಳಿದರು.
ಧೈರ್ಯವಾಗಿ ಹೆಣ್ಣುಮಕ್ಕಳು ಇಂತಹ ವಿಚಾರಗಳನ್ನು ಹೇಳುವುದೇ ಕಷ್ಟ. ಅಂತಹ ಸಂದರ್ಭದಲ್ಲಿ ತಮ್ಮ ನೋವನ್ನು ಹೇಳಿಕೊಳ್ಳಲು ಮುಂದಾಗಿದ್ದಾರೆ. ಅದನ್ನು ತಾಳ್ಮೆಯಿಂದ ಕೇಳಿ ಎಂದು ಸಲಹೆ ನೀಡಿದರು.
ಬೇರೆ ಬೇರೆ ರಂಗದಲ್ಲೂ ಶೋಷಣೆ, ದೌರ್ಜನ್ಯ ನಡೆಯುತ್ತಿವೆ. ಅವರಿಗೂ ನ್ಯಾಯ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘದ ಉಪಾಧ್ಯಕ್ಷೆ ಸುಧಾರಮಣಿ, ಎಸ್ಯುಸಿಐನ ಕೆ.ಉಮಾ, ಪತ್ರಕರ್ತ ರವೀಂದ್ರಭಟ್ ಮತ್ತಿತರರು ಉಪಸ್ಥಿತರಿದ್ದರು.