ಬೆಂಗಳೂರು, ಅ.25- ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ನಲ್ಲಿ ಮೀ ಟೂ ಆಯ್ತು. ಇದೀಗ ಬಿಬಿಎಂಪಿಯಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮೀ ಟೂ ಹೆಸರಿನಲ್ಲಿ ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಮಹಿಳಿಯರ ಮೇಲೆ ಲೈಂಗಿಕ ಕಿರುಕುಳ ಕೇವಲ ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಅಥವಾ ಶ್ರೀಮಂತರಿಗಷ್ಟೇ ಅಲ್ಲ, ಬಡವರ ಮೇಲೂ ಇಂತಹ ದೌರ್ಜನ್ಯಗಳು ಹಾಗುತ್ತಿವೆ. ಅದರಲ್ಲೂ ಬಿಬಿಎಂಪಿ ಮಹಿಳಾ ಪೌರಕಾರ್ಮಿಕರ ಮೇಲೆ ನಿತ್ಯ ಲೈಂಗಿಕ್ಯ ದೌರ್ಜನ್ಯ ನಡೆಯುತ್ತಿದೆ ಎಂದು ಹೆಸರು ಹೇಳಿಕೊಳ್ಳದ ಮಹಿಳೆ ಬರೆದಿದ್ದಾರೆ.
ಪೌರಕಾರ್ಮಿಕರು ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ನಿತ್ಯ ಕೆಲಸಕ್ಕೆ ಹೋದಾಗ ಹಾಜರಾತಿ ಪಡೆಯುವಾಗ ಪಾಲಿಕೆ ಅಧಿಕಾರಿಗಳು ಹೇಳಿದ ಹಾಗೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಹಾಜರಾತಿ ಕಡಿತಗೊಳಿಸುತ್ತಾರೆ. ಪೌರಕಾರ್ಮಿಕರ ಬಳಿ ಸ್ಮಾರ್ಟ್ಫೆÇೀನ್ ಇಲ್ಲ. ಒಂದು ವೇಳೆ ಇದ್ದಿದ್ದರೆ ಇಂತಹ ಅಧಿಕಾರಿಗಳ ಮುಖವಾಡ ಬಯಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ಒಂದೊತ್ತಿನ ಊಟಕ್ಕೂ ಪರದಾಡುವ ಜನ ಪೌರಕಾರ್ಮಿಕ ಕೆಲಸಕ್ಕೆ ಬರುತ್ತಾರೆ. ಅಂತಹವರ ಮೇಲೆ ನೀಚ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿ ಮಾನಸಿಕವಾಗಿ ಹಿಂಸಿಸಿದ್ದಾರೆ. ನಮ್ಮ ಅತ್ತೆ ಕೂಡ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಗೋಮುಕ ವ್ಯಾಗ್ರಗಳು ಕಾಮಾಲೆ ಕಣ್ಣಿನಿಂದ ನೋಡುತ್ತಾರೆ. ಇದರಿಂದ ನನ್ನ ಅತ್ತೆ ಸದಾ ಕಣ್ಣೀರು ಹಾಕುತ್ತಾರೆ. ಇಂತಹ ಅಧಿಕಾರಿಗಳ ಕಾಮ ಚೇಸ್ಟೆಗೆ ಬಿಬಿಎಂಪಿ ಯಾವಾಗ ಬ್ರೇಕ್ ಹಾಕುತ್ತದೋ ಕಾದು ನೋಡಬೇಕು ಎಂದು ಹೆಸರು ಬರೆಯದೆ ಮಹಿಳೆ ನೋವು ತೋಡಿಕೊಂಡಿದ್ದಾರೆ.