ಬೆಂಗಳೂರು, ಅ.25-ರಾಜ್ಯ ಸರ್ಕಾರ 2017ನೇ ಸಾಲಿನ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ನಟಿ ತಾರ, ನಟ ವಿಶೃತ್ ಅತ್ಯುತ್ತಮಕಲಾವಿದರ ಪ್ರಶಸ್ತಿ ಪಡೆದಿದ್ದಾಎರೆ. ಶುದ್ಧಿ, ಮಾರ್ಚ್ 22, ತುಳುಭಾಷೆಯ ಪಡ್ಡಾಯಿಕ್ರಮಾವಾಗಿ ಪ್ರಥಮ, ದ್ವಿತೀಯ, ತೃತೀಯ ಚಿತ್ರಗಳಾಗಿ ಆಯ್ಕೆಯಾಗಿವೆ.
ಹೆಬ್ಬೆಟ್ಟು ರಾಮಕ್ಕ ಚಿತ್ರ ಮೂರು ವಿಭಾಗದಲ್ಲಿ ಪ್ರಶಸ್ತಿ ಗಳಿಸಿ ಛಾಂಪಿಯನ್‍ಆಗಿದೆ. ನಟ ಪುನಿತ್‍ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಅತ್ಯುತ್ತಮ ಮನರಂಜನಾಚಿತ್ರವಾಗಿಆಯ್ಕೆಯಾಗಿದೆ.ಆಯ್ಕೆ ಸಮಿತಿ ಕಳೆದ ವರ್ಷ ಬಿಡುಗಡೆಯಾದ 121 ಚಿತ್ರಗಳನ್ನು ವೀಕ್ಷಣೆ ಮಾಡಿ ಅಂತಿಮವಾಗಿ 25 ಪ್ರಶಸ್ತಿಗೆ ಚಿತ್ರಗಳನ್ನು ಮತ್ತುಕಲಾವಿದರನ್ನುಆಯ್ಕೆ ಮಾಡಿದೆ.
ಮೊದಲ ಅತ್ಯುತ್ತಮ ಚಿತ್ರವಾಗಿ ಆದರ್ಶ್ ಎಚ್‍ಈ ರಪ್ಪ ನಿರ್ದೇಶನದ ಮಾದೇಶ್ ಟಿ. ಭಾಷ್ಕರ್ ನಿರ್ಮಾಣದ ಶುದ್ದಿ ಆಯ್ಕೆಯಾಗಿದ್ದು, ಒಂದು ಲಕ್ಷರೂ.ನಗದು, 50 ಗ್ರಾಮ್‍ಚಿನ್ನದ ಪದಕ ಪಡೆದುಕೊಳ್ಳುತ್ತಿದೆ.
ಎರಡನೇ ಅತ್ಯತ್ತಮ ಚಿತ್ರವಾಗಿ ಕೊಡ್ಲು ರಾಮಕೃಷ್ಣ ನಿರ್ದೇಶನದ, ಹರೀಶ್ ಶೇರ್‍ಗಾರ್ ನಿರ್ಮಾಣದ ಮಾರ್ಚ್ 22 ಆಯ್ಕೆಯಾಗಿದ್ದು, 75 ಸಾವಿರ ನಗದು, 100 ಗ್ರಾಮ್ ಬೆಳ್ಳಿ ಪದಕ ಪಡೆದುಕೊಳ್ಳುತ್ತಿದೆ.
ಮೂರನೇ ಅತ್ಯುತ್ತಮ ಚಿತ್ರವಾಗಿ ಅಭಯ್ ಸಿಂಹ ನಿರ್ದೇಶನದ ನಿತ್ಯಾನಂದ ಪೈ ನಿರ್ಮಾಣದ ಪಡ್ಡಾಯಿ ಆಯ್ಕೆಯಾಗಿದೆ. 50 ಸಾವಿರ ನಗದು, 100 ಗ್ರಾಮ್ ಬೆಳ್ಳಿ ಪದಕ ಪಡೆದುಕೊಳ್ಳುತ್ತಿದೆ.
ಖ್ಯಾತ ನಟಿ ತಾರ ಅಭಿನಯದ ಹೆಬ್ಬೆಟ್ ರಾಮಕ್ಕ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಆಯ್ಕೆಯಾಗಿದ್ದು, ನಿರ್ದೇಶಕರಾದ ಎನ್.ಆರ್.ನಂಜುಂಡೇಗೌಡ, ನಿರ್ಮಾಣ ಸಂಸ್ಥೆಯಾದ ಸವಿರಾಜ್ ಸಿನಿಮಾಸ್‍ತಲಾ 75 ಸಾವಿರರೂ.ನಗದು, 100 ಬೆಳ್ಳಿ ಪದಕ ಪಡೆದುಕೊಳ್ಳುತ್ತಿದ್ದಾರೆ.
ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ನಟನೆಯ ರಾಜಕುಮಾರ ಚಿತ್ರ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಆಯ್ಕೆಯಾಗಿದೆ. ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, ನಿರ್ದೇಶಕ ಸಂತೋಷ್ ಆನಂದ್‍ರಾಮ್ ತಲಾ 50 ಸಾವಿರ ನಗದು, 100 ಗ್ರಾಮ ಬೆಳ್ಳಿ ಪದಕ ಪಡೆಯಲಿದ್ದಾರೆ.
ಎಳೆಯರು ನಾವು ಗೆಳೆಯರು ಅತ್ಯುತ್ತಮ ಮಕ್ಕಳ ಚಿತ್ರವಾಗಿದೆ.ನಿರ್ದೇಶಕ ವಿಕ್ರಮ್ ಸೂರಿ, ನಿರ್ಮಾಪಕ ನಾಗರಾಜ್‍ಆರ್‍ಆಗಿದ್ದಾರೆ.ಗಂಗಾಧರ್ ಸಾಳಿಮಠ ನಿರ್ದೇಶನಕಅಯನ ನಿರ್ದೇಶಕರ ಪ್ರಥಮ ನಿರ್ದೇಶನದಅತ್ಯುತ್ತಮಚಿತ್ರವಾಗಿಆಯ್ಕೆಯಾಗಿದೆ.ಕೊಂಕಣಿ ಭಾಷೆಯ ಸೋಫಿಯಾಅತ್ಯತ್ತಮ ಪ್ರಾದೇಶಿಕ ಚಿತ್ರವಾಗಿದ್ದು, ಹ್ಯಾರಿ ಫರ್ನಾಂಡಿಸ್ ನಿರ್ದೇಶನಮಜೆನಿತ್ ನರೋನಾ ನಿರ್ಮಾಪಕರಾಗಿದ್ದಾರೆ.ಈ ಎಲ್ಲಾ ಚಿತ್ರಗಳಿಗೂ ತಲಾ 50 ಸಾವಿರ ನಗದು, 100 ಗ್ರಾಮ್ ಬೆಳ್ಳಿ ಪದಕ ನೀಡಲಾಗುತ್ತಿದ್ದು, ನಿರ್ದೇಶಕ ಮತ್ತು ನಿರ್ಮಾಪಕರಿಬ್ಬರು ಬಹುಮಾನ ಪಡೆಯಲಿದ್ದಾರೆ.
ಸುಬ್ಬಯ್ಯ ನಾಯ್ಡುಅವರ ಹೆಸರಿನಲ್ಲಿ ನೀಡಲಾಗುವ ಅತ್ಯತ್ತಮ ನಟ ಪ್ರಶಸ್ತಿಯನ್ನು ಮಂಜರಿ ಚಿತ್ರದ ನಾಯಕ ವಿಶೃತ್ ನಾಯ್ಕ್ ಪಡೆದಿದ್ದಾರೆ. ಹೆಬ್ಬೆಟ್‍ರಾಮಕ್ಕಚಿತ್ರಕ್ಕಾಗಿ ನಟಿತಾರಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ.ಎಸ್.ಅಶ್ವಥ್ ಹೆಸರಿನಲ್ಲಿ ನೀಡಲಾಗುವಅತ್ಯತ್ತಮ ಪೋಷಕ ನಟ ಪ್ರಶಸ್ತಿಯನ್ನು ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆಚಿತ್ರದ ನಟ ಮಂಜುನಾಥ್ ಹೆಗಡೆಅವರಿಗೆ, ಅತ್ಯತ್ತಮ ನಟಿ ಪ್ರಶಸ್ತಿಯನ್ನು ಮೂಕ ನಾಯಕಚಿತ್ರದರೇಖಾ ಪಡೆದುಕೊಂಡಿದ್ದಾರೆ.
ಕೆಂಪಿರ್ವೆ ಚಿತ್ರದ ಕತೆ ಅತ್ಯುತ್ತಮ ಚಿತ್ರಕತೆಯಾಗಿ, ಹೆಬ್ಬೆಟ್‍ರಾಮಕ್ಕ ಚಿತ್ರದ ಸಂಭಾಷಣೆಗಾಗಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅತ್ಯುತ್ತಮ ಸಂಭಾಷಣಾಕಾರರಾಗಿ, ಚಮಕ್ ಚಿತ್ರದ ಛಾಯಾಗ್ರಹಣಕ್ಕಾಗಿ ಸಂತೋಷ್‍ರೈ ಪಾತಾಜಿ ಅತ್ಯುತ್ತಮ ಛಾಯಾಗ್ರಾಹಕರಾಗಿ, ಹರೀಶ್‍ಕೊಮ್ಮೆ ಅವರು ಮಫ್ತಿ ಚಿತ್ರಕ್ಕಾಗಿ ಅತ್ಯುತ್ತಮ ಸಂಕಲನಕಾರರಾಗಿ, ಹೆಬ್ಬುಲಿ ಚಿತ್ರದರವಿ ಎಸ್.ಎ. ಅವರುಅತ್ಯುತ್ತಮ ಕಲಾ ನಿರ್ದೇಶಕರಾಗಿ, ಮಾರ್ಚ್ 22 ಚಿತ್ರದ ಮುತ್ತುರತ್ನದ ಪ್ಯಾಟೆ ಹಾಡಿಗೆ ಜೆ.ಎಂ.ಪ್ರಹ್ಲಾದ್‍ಅವರುಅತ್ಯುತ್ತಮಗೀತರಚನೆಕಾರರಾಗಿ, ಹುಲಿರಾಯ ಚಿತ್ರದ ವಲಸೆ ಬಂದವರೇ ಹಾಡಿನಗಾಯನಕ್ಕೆ ತೇಜಸ್ವಿ ಹರಿದಾಸ್‍ಅವರುಅತ್ಯುತ್ತಮ ಹಿನ್ನೆಲೆಗಾಯಕರಾಗಿ, ದಯವಿಟ್ಟು ಗಮನಿಸಿ ಚಿತ್ರದ ಅಸಾದುಲ್ಲಾದಾಡಿ ಬಿಟ್ಟ ಹಾಡಿಗೆ ಅಪೂರ್ವ ಶ್ರೀಧರ್ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ, ಹೆಬ್ಬುಲಿ ಚಿತ್ರದ ಅತ್ಯುತ್ತಮ ನಿರ್ಮಾಣ ನಿರ್ವಾಹಕರಾಗಿ ಸುರೇಶ್ ಕೆ ಪ್ರಶಸ್ತಿ ಗಳಿಸಿದ್ದಾರೆ. ವೈಯಕ್ತಿಕ ಪ್ರಶಸ್ತಿ ಗಳಿಸಿದ ಎಲ್ಲಾಕಲಾವಿದರಿಗೂತಲಾ 20 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕಕೊಡಲಾಗುತ್ತದೆ.
ರಾಗ ನಾಯಕ ನಟ ಮಿತ್ರ ಮತ್ತು ಮಹಾಕಾವ್ಯಚಿತ್ರ ಶ್ರೀದರ್ಶನ್ ಅವರುತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆತಲಾ 10 ಸಾವಿರ ನಗದು ಮತ್ತು 50 ಗ್ರಾಂ ಬೆಳ್ಳಿ ಪದಕ ನೀಡಲಾಗುತ್ತಿದೆ.
ಆಯ್ಕೆ ಸಮಿತಿಯಲ್ಲಿ ನಿರ್ದೇಶಕ ಎನ್.ಎಸ್.ಶಂಕರ್‍ಅಧ್ಯಕ್ಷರಾಗಿ, ಪತ್ರಕರ್ತ ಸದಾಶಿವ ಶೆಣೈ, ಸಾಹಿತಿರಾಜಪ್ಪ ದಳವಾಯಿ, ಇಂದು ವಿಶ್ವನಾಥ್, ಎನ್.ಜಯರಾಮಯ್ಯ, ಬಿ.ಆರ್.ವಿಶ್ವನಾಥ್, ಕೆ.ಸಿ.ಎನ್.ಮೋಹನ್, ಶಶಿಧರ್ ಅಡಪ ಸದಸ್ಯರಾಗಿ ಕೆಲಸ ಮಾಡಿದ್ದಾರೆ.