ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಾದ್ಯಂತ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದಕರು ಮತ್ತು ಪ್ರಮುಖ ಉದ್ಯಮ ನಾಯಕರೊಂದಿಗೆ ಬುಧವಾರ ಸಂವಹನ ನಡೆಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸುಮಾರು 1೦೦ ಕೇಂದ್ರಗಳಿಂದ ಆಯ್ದ ವೃತ್ತಿಪರರು ಭಾಗವಹಿಸುವ ನಿರೀಕ್ಷೆಯಿದೆ, ಜೊತೆಗೆ ಪ್ರಧಾನಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ “ಮೈನ್ ನಹೀನ್ ಹಮ್” ಎಂಬ ಪೋರ್ಟಲ್ ಮತ್ತು ಆ್ಯಪ್ ಪ್ರಾರಂಭಿಸಿದ್ದಾರೆ.
ಈ ಪೋರ್ಟಲ್ ’ಸ್ವಂತಕ್ಕಾಗಿ ಸಮಾಜ’ ಎಂಬ ವಿಷಯದೊಂದಿಗೆ ಐಟಿ ವೃತ್ತಿಪರರು ಮತ್ತು ಸಂಸ್ಥೆಗಳನ್ನು ಸಾಮಾಜಿಕ ಕಾರಣಗಳಿಗಾಗಿ ಮತ್ತು ಸಮಾಜ ಸೇವೆಯನ್ನು ಮಾಡುವ ಅವರ ಪ್ರಯತ್ನವನ್ನು ಒಂದೇ ವೇದಿಕೆಯಲ್ಲಿ ತರುವುದು ಇದರ ಉದ್ಧೇಶವಾಗಿದೆ
ಈ ಪೋರ್ಟಲ್ ಸಮಾಜದ ದುರ್ಬಲ ವಿಭಾಗದಲ್ಲಿ ಸೇವೆ ಮಾಡುವುದಕ್ಕೆ ಸಹಾಯವಾಗುತ್ತದೆ.
ಇದರಲ್ಲಿ ಆಸಕ್ತಿಯುಳ್ಳ ಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವದರಿಂದ ಸಮಾಜಕ್ಕೆ ಲಾಭವಾಗಲಿದೆ.