ಸೇಲಂ, ಅ.24-ದುಷ್ಕರ್ಮಿಯೊಬ್ಬ 13 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದು ರಸ್ತೆ ಎಸೆದಿರುವ ಭೀಬತ್ಸ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ರಾಜಲಕ್ಷ್ಮಿ (13) ಭೀಕರವಾಗಿ ಕೊಲೆಯಾದ ಬಾಲಕಿ. ಈ ಸಂಬಂಧ ಪೆÇಲೀಸರು ದಿನೇಶ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ತಲೈಪೈಪತ್ತಿ ನಿವಾಸಿಯಾಗಿರುವ ಬಾಲಕಿ ಸ್ಥಳೀಯ ಶಾಲೆಯಲ್ಲಿ ಎಂಟನೆ ತರಗತಿ ಓದುತ್ತಿದ್ದಳು. ನೆರೆಮನೆಯ ದಿನೇಶ್ ಕುಮಾರ್ ಎಂಬಾತ ಪ್ರತಿ ನಿತ್ಯ ಬಾಲಕಿಯನ್ನು ಚುಡಾಯಿಸುತ್ತಿದ್ದ.
ಆರೋಪಿ ದಿನೇಶ್ ಸೋಮವಾರ ಸಹ ಕಂಠಪೂರ್ತಿ ಮದ್ಯ ಸೇವಿಸಿ ಯಾರೂ ಇಲ್ಲದ ವೇಳೆ ಬಾಲಕಿ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಬಾಲಕಿ ಜೋರಾಗಿ ಕೂಗಿಕೊಂಡಳು. ಬಾಲಕಿಯ ತಾಯಿ ಮನೆಗೆ ಬರುತ್ತಿರುವುದನ್ನು ನೋಡಿ ದುಷ್ಕರ್ಮಿ ಹರಿತ ಆಯುಧದಿಂದ ಆಕೆಯ ತಲೆ ಕತ್ತರಿಸಿ ರಸ್ತೆಗೆ ಎಸೆದು ಪರಾರಿಯಾಗಿದ್ದ.
ಅತ್ತೂರು ಠಾಣೆ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ವೇಳೆ ದಿನೇಶ್ ಪಾನಮತ್ತನಾಗಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.