ಹೊಸದಿಲ್ಲಿ: ಸಿಬಿಐನ ಇಬ್ಬರು ಮುಖ್ಯ ಅಧಿಕಾರಿಗಳ ಗುದ್ದಾಟ ತೀವ್ರಗೊಂಡ ವೇಳೆಯಲ್ಲಿ ಇತಿಹಾದಲ್ಲೇ ಮೊದಲ ಬಾರಿಗೆ ಎನ್ನುವ ಹಾಗೆ ಅತ್ಯುನ್ನತಾ ತನಿಖಾ ಸಂಸ್ಥೆಯ ಪ್ರಮುಖ ಮೂವರು ಅಧಿಕಾರಿಗಳಿಗೆ ರಜೆ ನೀಡಲಾಗಿದೆ.
ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ,ಸಂಸ್ಥೆಯ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತು ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರನ್ನು ಕೇಂದ್ರ ಸರಕಾರ ಮಂಗಳವಾರ ರಜೆ ನೀಡಿ ಕಳುಹಿಸಿದೆ.
ಹಂಗಾಮಿ ಮುಖ್ಯಸ್ಥರನ್ನಾಗಿ ಹಾಲಿ ಸಹಾಯಕ ನಿರ್ದೇಶಕರಾಗಿದ್ದ ಎಂ.ನಾಗೇಶ್ವರ್ ರಾವ್ ಅವರನ್ನು ನೇಮಿಸಲಾಗಿದೆ.
ಮಂಗಳವಾರ ರಾತ್ರಿ ಸಂಪುಟದ ನೇಮಕಾತಿ ಸಮಿತಿಯ ವಿಶೇಷ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಗೇಶ್ವರ್ ರಾವ್ ಅವರನ್ನು ಹುದ್ದೆಗೆ ನೇಮಕ ಮಾಡಿದ್ದಾರೆ.
ಯಲ್ಲಿನ ಅಕ್ರಮಕ್ಕೆ ಸಂಬಂಧಿಸಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ದೂರು ದಾಖಲಿಸಲಾಗಿದ್ದರೆ, ಸೋಮವಾರ ಡೆಪ್ಯುಟಿ ಎಸ್‌ಪಿ ದೇವೇಂದ್ರ ಕುಮಾರ್‌ರನ್ನು ಬಂಧಿಸ ಲಾಗಿತ್ತು. ಮಾಂಸ ರಫ್ತುದಾರ ಮೊಯಿನ್ ಖುರೇಶಿ ಪ್ರಕರಣದ ತನಿಖೆ
ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಹಾಗೂ ನಿರ್ದೇಶಕ ಅಲೋಕ್ ಕುಮಾರ್‌ರನ್ನು ಪ್ರಧಾನಿ ಕಚೇರಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಮನ್ಸ್ ನೀಡಿದ್ದರು.
ಅಸ್ತಾನಾ ಮತ್ತು ಅಲೋಕ್ ಕುಮಾರ್ ಅವರ ನಡುವಿನ ಹೋರಾಟ ದೆಹಲಿ ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದು ಇಬ್ಬರೂ ಎಫ್ಐಆರ್ ರದ್ದು ಮಾಡಲು ಮನವಿ ಸಲ್ಲಿಸಿದ್ದರು.