ಎರಡು ಗುಂಪುಗಳ ನಡುವೆ ಗಲಾಟೆ, ಘಟನೆಯಲ್ಲಿ 6 ಮಂದಿ ಸಾವು ಕೆಲವರಿಗೆ ಗಾಯ

ಭುಜ್, ಅ.24-ಗ್ರಾಮ ಪಂಚಾಯಿತಿ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಆರು ಮಂದಿ ಹತರಾಗಿ, ಕೆಲವರು ಗಾಯಗೊಂಡಿರುವ ಘಟನೆ ಗುಜರಾತ್‍ನ ಕುಚ್ ಜಿಲ್ಲೆಯ ಛಾಸ್ರಾ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಘರ್ಷಣೆಯಲ್ಲಿ ಒಂದೇ ಕುಟುಂಬದ ಮಗನ್ ಅಹಿರ್(27), ಭರತ್ ಅಹಿರ್(28), ಭಾರ್ಗವ್ ಆಹಿರ್(26) ಮತ್ತು ಚೇತನ್ ಆಹಿರ್(38) ಹಾಗೂ ಮಹಿಳಾ ಸರ್‍ಪಂಚ್ (ಗಾಮ ಪಂಚಾಯಿ ಮುಖ್ಯಸ್ಥೆ) ಪುತ್ರ ಅಬಿದ್ ಸಬ್ಬರ್ ಭುಲಿಯಾ(25) ಮತ್ತು ಅಮದ್ ಅಬ್ದುಲ್ ಭುಲಿಯಾ(70) ಸ್ಥಳದಲ್ಲೇ ಹತರಾದರು ಎಂದು ಕುಚ್ ವಲಯದ ಪೆÇಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಭಾರದ ತಿಳಿಸಿದ್ದಾರೆ.

ಈ ಮಾರಾಮಾರಿಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಚ್ ಜಿಲ್ಲೆಯ ಛಾಸ್ರಾ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆ ಸರ್‍ಪಂಚ್ ಆಗಿ ಚುನಾಯಿತರಾಗಿದ್ದರು. ಆಗಿನಿಂದಲೂ ಎರಡು ಕೋಮುಗಳ ನಡುವೆ ವಿವಾದ-ಗಲಬೆ ಇತ್ತು.

ನಿನ್ನೆ ರಾತ್ರಿ ಇದು ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳೊಂದಿಗೆ ಭೀಕರ ಘರ್ಷಣೆ ನಡೆದು ಆರು ಜನರ ಕಗ್ಗೊಲೆಯಲ್ಲಿ ಪರ್ಯಾವಸನಗೊಂಡಿದೆ.
ಈ ಘಟನೆ ನಂತರ ಗ್ರಾಮದಲ್ಲಿ ಪ್ರಕ್ಷುಬ್ಧ ಸ್ಥಿತಿ ನೆಲೆಸಿದ್ದು ಹಿಂಸಾಚಾರ ಮರುಕಳಿಸದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಎರಡೂ ಸಮುದಾಯಗಳು ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಲವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ