ಬೆಂಗಳೂರು, ಅ.23-ಸಮಾಜದ ಬಗೆಗೆ ಉತ್ತಮ ಉದ್ದೇಶ ಹೊಂದಿರುವ ವ್ಯಕ್ತಿ ಹಾಗೂ ಎನ್ಜಿಒಗಳಿಗೆ ಬೆಂಬಲ ನೀಡುವ ಮತ್ತು ಅವರ ಆಲೋಚನೆಗಳನ್ನು ಕ್ರಿಯೆಗಳನ್ನಾಗಿ ಮಾರ್ಪಡಿಸುವಲ್ಲಿ ನೆರವಾಗುವ ಪ್ರಯತ್ನವಾಗಿ ಇನ್ಫೋಸಿಸ್ ಪ್ರತಿಷ್ಠಾನದಿಂದ ಆರೋಹಣಾ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲು ಉದ್ದೇಶಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರು, ಸಮಾಜಸೇವೆ ಹಾಗೂ ಕಾಪೆರ್Çೀರೇಟ್ ಸಂಸ್ಥೆಗಳ ಹೊಣೆಗಾರಿಕೆ ಅಂಗವಾದ ಇನ್ಫೋಸಿಸ್ ಸಂಸ್ಥೆ ಸಾಮಾಜಿಕ ಕ್ಷೇತ್ರದಲ್ಲಿ ನಾವೀನ್ಯತೆಗಳಿಗೆ ಉತ್ತೇಜನ ನೀಡುವುದು ಹಾಗೂ ಇನ್ನಷ್ಟು ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವವರಿಗೆ ಹೊಸ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲು ಮುಂದಾಗಿದ್ದೇವೆ ಎಂದರು.
ಸಾಮಾಜಿಕ ಕ್ಷೇತ್ರದ ಪ್ರಮುಖ ಇನ್ನೋವೇಟರ್ಗಳಿಗೆ ನೀಡಲಾಗುವ ಈ ಪ್ರಶಸ್ತಿಗಾಗಿ 1.5 ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗಿದ್ದು, ಸಮಾಜದಲ್ಲಿ ಬದಲಾವಣೆ ತರುವಂತಹ ಸಾಮಥ್ರ್ಯವಿರುವ ಅರ್ಹ ಸಾಮಾಜಿಕ ಇನ್ನೋವೇಟರ್ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆಗಾಗಿ ತೀರ್ಪುಗಾರರ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಈ ಸಮಿತಿಯಲ್ಲಿ ಐಎಎಂನ ಪೆÇ್ರ.ತ್ರಿಲೋಚನ್ಶಾಸ್ತ್ರಿ, ವಿಜ್ಞಾನ ತಜ್ಞ ಅರವಿಂದ್ ಗುಪ್ತ, ಹೈದರಾಬಾದ್ನ ಐಐಟಿಯ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಉಪನ್ಯಾಸಕ ಜಿ.ವಿ.ವಿ.ಶರ್ಮಾ, ಹೈದರಾಬಾದ್ನ ಐಎಎಂನ ಅತಿಥಿ ಉಪನ್ಯಾಸಕ ಪೆÇ್ರ.ಅನಿಲ್ಗುಪ್ತಾ ಸೇರಿದಂತೆ ತಾವು ಆ ತಂಡದಲ್ಲಿ ಇರಲಿದ್ದು, ಆವಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ವೆಬ್ಸೈಟ್ ಬಳಸುವಂತೆ ತಿಳಿಸಿದರು.
ಸಾಮಾಜಿಕ ವಲಯದಲ್ಲಿ ವಿಶಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ಆ ಮೂಲಕ ದೇಶದಲ್ಲಿರುವ ಅವಕಾಶವಂಚಿತ ತಂಡಗಳು, ವ್ಯಕ್ತಿಗಳು ಹಾಗೂ ಇನ್ಜಿಒಗಳನ್ನು ಗುರುತಿಸುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ತೀರ್ಪು ನೀಡುವ ಮಾನದಂಡ ಕುರಿತ ಮಾಹಿತಿಗಾಗಿ ಡಿಡಿಡಿ.ಜ್ಞ್ಛಿಟoqso.್ಚಟಞ/ZZ್ಟಟeZ್ಞ ಸಂಪರ್ಕಿಸುವಂತೆ ತಿಳಿಸಿದ್ದಾರೆ.