ಈ ದೀಪಾವಳಿಗೆ ಸುಪ್ರೀಂ ಕೋರ್ಟ್​ ನಿಷೇಧಿಸುತ್ತಾ ಪಟಾಕಿ? ಇಂದು ತೀರ್ಪು

ನವದೆಹಲಿ: ಪರಿಸರ ಮಾಲಿನ್ಯದ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಇಂದು ಸುಪ್ರೀಂ ಕೋರ್ಟ್​​ ದೇಶದಾದ್ಯಂತ ಪಟಾಕಿ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರುವ ವಿಚಾರವಾಗಿ ಸಲ್ಲಿಸಲಾಗಿರುವ ಮನವಿಯ ತೀರ್ಪು ಪ್ರಕಟಿಸಲಿದೆ. ಈ ವಿಚಾರವಾಗಿ ಜಸ್ಟೀಸ್​ ಎ. ಕೆ ಸಿಕ್ರಿ ಹಾಗೂ ಜಸ್ಟಿಸ್​ ಅಶೋಕ್​ ಭೂಷಣ್​ರವರ ದ್ವಿಸದಸ್ಯ ಪೀಠ ಆಗಸ್ಟ್​ 28ರಂದು ತೀರ್ಪು ಕಾಯ್ದಿರಿಸಿತ್ತು.
ಸುಪ್ರೀಂ ಕೋರ್ಟ್​ ಈ ಹಿಂದೆ ನಿಷೇಧಕ್ಕೆ ಸಂಬಂಧಿಸಿದಂತೆ ನಡೆಸಿದ್ದ ವಿಚಾರಣೆ ವೇಳೆ ಪಟಾಕಿ ಉತ್ಪಾದಕರ ಜೀವನೋಪಾಯದ ಮೂಲಭೂತ ಹಕ್ಕುಗಳು ಹಾಗೂ ದೇಶದ ಸುಮಾರು 1.3 ಶತಕೋಟಿ ಜನರ ಆರೋಗ್ಯ ಆರೋಗ್ಯದ ಹಕ್ಕು ಸೇರಿದಂತೆ ಇನ್ನಿತರ ಹಲವಾರು ವಿಚಾರಗಳನ್ನು ಗಮನಿಸಬೇಕಾಗುತ್ತದೆ ಎಂದಿತ್ತು.
ಇದೇ ಸಂದರ್ಭದಲ್ಲಿ ಸಂವಿಧಾನದ ಪರಿಚ್ಛೇದ 21(ಜೀವನದ ಹಕ್ಕು) ಎಲ್ಲಾ ವರ್ಗದ ಜನರಿಗೆ ಅನ್ವಯವಾಗುತ್ತದೆ. ಅಲ್ಲದೇ ಪಟಾಕಿಗಳ ಮೇಲೆ ದೇಶವ್ಯಾಪಿ ನಿಷೇಧ ಹೇರುವ ವೇಳೆ ಸಮತೋಲನ ಕಾಪಾಡಿಕೊಳ್ಳುವುದು ಅತಿ ಅಗತ್ಯ ಎಂದೂ ಸುಪ್ರೀಂ ತಿಳಿಸಿತ್ತು.
ನ್ಯಾಯಾಲಯವು ಮಾಲಿನ್ಯ ನಿಯಂತ್ರಣವನ್ನು ತಡೆಗಟ್ಟಲು ಬೇಕಾದ ಅಗತ್ಯ ಕ್ರಮಗಳನ್ನು ಸೂಚಿಸುವುದರೊಂದಿಗೆ ಪಟಾಕಿಯ ಮೇಲೆ ನಿಷೇಧ ಹೇರುವುದರಿಂದ ವ್ಯಾಪಕವಾಗಿ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ