ಹಾಂಗ್ಕಾಂಗ್: ವಿಶ್ವದ ಅತಿ ಉದ್ದದ ಸಾಗರದ ಮೇಲಿನ ತಿರುವು ಸೇತುವೆ ಎಂದೇ ಪ್ರಖ್ಯಾತವಾದ ಹಾಂಗ್ಕಾಂಗ್ -ಝಹೈ -ಮಕೊಯ್ ಮಾರ್ಗದ ಸೇತುವೆ ಇಂದು ಲೋಕಾರ್ಪಣೆಗೊಳ್ಳಲಿದೆ.
ದಕ್ಷಿಣ ಚೀನಾದ ಪರ್ಲ್ ರಿವರ್ ಡೆಲ್ಟಾದ ಪೂರ್ವ ಹಾಗೂ ಪಶ್ಚಿವ ಭಾಗಗಳನ್ನು ಸಂಪರ್ಕಿಸುವ ಈ ಸೇತುವೆ 55 ಕಿ.ಮೀ. ಉದ್ದವಿದೆ. ನಾಳೆ ವಾಹನಗಳ ಸಾಗಾಟಕ್ಕೆ ತೆರೆದುಕೊಳ್ಳಲಿದ್ದು, ಹಾಂಗ್ಕಾಂಗ್ ಹಾಗೂ ಝಹೈಯ ನಡುವಿನ ಅಂತರವನ್ನು 4 ಗಂಟೆಯಿಂದ ಕೇವಲ 45 ನಿಮಷಕ್ಕೆ ಕಡಿತಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದ ಅತಿ ಉದ್ದದ ಸೇತುವೆಯನ್ನು ಬೀಜಿಂಗ್ನ ಗ್ರೇಟರ್ ಬೇ ಏರಿಯಾ ಯೋಜನೆಯಡಿ ನಿರ್ಮಿಸಲಾಗಿದೆ. ಈ ಮೂಲಕ ಗೌಂಗ್ಡೊಂಗ್ ಅನ್ನು ಉತ್ತರ ವ್ಯಾಪಾರಿ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. 2030ರ ವೇಳೆಗೆ ಪ್ರತಿದಿನ 29,000 ವಾಹನಗಳು ಹಾಗೂ 126,000 ಸವಾರರು ಈ ಸೇತುವೆ ಮೂಲಕ ಸಾಗಿಹೋಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಬೃಹತ್ ಸೇತುವೆಯು 11 ನಗರಗಳು ಸೇರಿ ಗ್ರೇಟರ್ ಬೆ ಏರಿಯಾವನ್ನು ಶೀಘ್ರವಾಗಿ ಸಂಪರ್ಕಿಸಲು ಸಹಾಯಕವಾಗಿದೆ. ಚೀನಾ, ಮಕೌ ಹಾಗೂ ಹಾಂಗ್ಕಾಂಗ್ ನಡುವಿನ ಪ್ರಯಾಣ ಸಮಯವನ್ನು ಕಡಿಮೆ ಮಾಡಲಿದೆ. ದಿನವೊಂದಕ್ಕೆ ಸುಮಾರು 40,000 ವಾಹನಗಳು ಸೇತುವೆ ಮೂಲಕ ಸಾಗುವ ನಿರೀಕ್ಷೆ ಇದೆ.