ಬಿಬಿಎಂಪಿಯ ಇಬ್ಬರು ಆರೋಗ್ಯ ಇನ್ಸ್‍ಪೆಕ್ಟರ್‍ಗಳು ಎಸಿಬಿ ಬಲೆಗೆ

ಬೆಂಗಳೂರು, ಅ.23- ಹೋಟೆಲ್ ಒಂದರ ಪರವಾನಿಗೆ ನವೀಕರಣಕ್ಕೆ ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿಯ ಇಬ್ಬರು ಆರೋಗ್ಯ ಇನ್ಸ್‍ಪೆಕ್ಟರ್‍ಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚೆನ್ನಮ್ಮನಕೆರೆ ಅಚ್ಚುಕಟ್ಟೆ ವ್ಯಾಪ್ತಿಯ ಬಿಬಿಎಂಪಿಯ ಇಬ್ಬರು ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಜಗದೀಶ್ ಮತ್ತು ಜೈ ಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.
ಹೊಟೇಲ್ ಒಂದರ ಲೈಸನ್ಸ್ ನವೀಕರಣಕ್ಕೆ ಹೊಟೇಲ್ ಮಾಲೀಕರು ಅರ್ಜಿ ಸಲ್ಲಿಸಿದ್ದರು. ಆದರೆ ನವೀಕರಣ ಮಾಡಿಕೊಡಬೇಕಾದರೆ 40 ಸಾವಿರ ರೂ. ಹಣ ನೀಡುವಂತೆ ಇವರಿಬ್ಬರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಬಗ್ಗೆ ಹೋಟೆಲ್ ಮಾಲೀಕರು ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದೀಗ 30 ಸಾವಿರ ರೂ. ಹಣ ನೀಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಬ್ಬರು ಅಧಿಕಾರಿಗಳ ಕಚೇರಿಯ ಕಪಾಟಿನಲ್ಲಿ ದಾಖಲೆವಿಲ್ಲದ 4 ಲಕ್ಷ ರೂ. ನಗದು ಕೂಡ ಪತ್ತೆಯಾಗಿದೆ. ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ಚೆನ್ನಮ್ಮನ ಅಚ್ಚುಕಟ್ಟೆ ಬಿಬಿಎಂಪಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.
ಅವರ ಕಚೇರಿಯಿಂದ ವಶಪಡಿಸಿಕೊಂಡಿರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ