ಕೊಚ್ಚಿ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ್ದ ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೋ ಮುಳಕಲ್ ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಜಲಂಧರ್ ನಲ್ಲಿ ಪತ್ತೆಯಾಗಿದೆ.
ಪಾದ್ರಿ ಕುರಿಯಕೋಸ್ ಕಟ್ಟುಥಾರ ಮೃತದೇಹ ಜಲಂಧರ್ ನಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು, ಹೊಸ ಅನುಮಾನಗಳು ಆರಂಭವಾಗಿವೆ.
ಕುರಿಯಕೋಸ್ ಅವರ ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆದರೆ, ಅವರ ಕುಟುಂಬಸ್ಥರು ಸಾವಿನ ಹಿಂದೆ ಕುತಂತ್ರಗಳಿರುವುದಾಗಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಫಾದರ್ ಕುರಿಯಕೋಸ್ ಅವರು ಬಿಷಪ್ ಫ್ರಾಂಕೋ ವಿರುದ್ಧ ಕೇರಳ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಕುರಿಯಕೋಸ್ ಅವರ ಸಹೋದರ ಜೋಸ್ ಕಟ್ಟುಥಾರ ಅವರು, ಸಹೋದರನ ಸಾವಿನ ಹಿಂದೆ ದೊಡ್ಡ ಪಿತೂರಿಯೇ ನಡೆದಿದೆ. ಬಿಷಪ್ ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ದೂರಿದ್ದಾರೆ.