ನೆಟ್ ಫ್ಲಿಕ್ಸ್ ನ ಬಳಕೆದಾರರು ಹೆಚ್ಚಿದ್ದು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸಿದೆ.
ವಿಶ್ವಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್ ಫ್ಲಿಕ್ಸ್ ನ ಒಟ್ಟಾರೆ ಗ್ರಾಹಕರ ಸಂಖ್ಯೆ ಈಗ 137 ಮಿಲಿಯನ್ ನಷ್ಟಾಗಿದೆ. ಕಳೆದ ತ್ರೈಮಾಸಿಕದಲ್ಲಿ ನೆಟ್ ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದ್ದು 403 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು, ಆದಾಯದಲ್ಲಿ ಶೇ.34 ರಷ್ಟು ಏರಿಕೆಯಾಗಿ, 4 ಬಿಲಿಯನ್ ನಷ್ಟಾಗಿದೆ.
ಇನ್ನು ನೆಟ್ ಫ್ಲಿಕ್ಸ್ ಲಾಭ ಗಳಿಸುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲೂ ನೆಟ್ ಫ್ಲಿಕ್ಸ್ ಷೇರುಗಳು ಶೇ.12 ರಷ್ಟು ಏರಿಕೆ ಕಂಡಿದೆ. ಒರಿಜಿನಲ್ ಕಂಟೆಂಟ್ ನಲ್ಲಿ ನೆಟ್ ಫ್ಲಿಕ್ಸ್ 8 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜನೆ ಹೊಂದಿದ್ದು, ಹೂಡಿಕೆದಾರರಿಗೆ ಲಾಭದ ಭರವಸೆ ನೀಡಲು ಬಯಸುತ್ತೇವೆ ಎಂದು ಸಂಸ್ಥೆ ಹೇಳಿದೆ.