ಮಹಾತ್ಮಗಾಂಧೀಜಿಯವರ ತತ್ವ ಮತ್ತು ಚಿಂತನೆ ವಿಚಾರ ಸಂಕಿರಣ

ಬೆಂಗಳೂರು, ಅ.22- ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರ ರಾಜ್ಯಶಾಸ್ತ್ರ ವಿಭಾಗ ಜ್ಞಾನಭಾರತಿಯ ವೆಂಕಟಗಿರಿಗೌಡ ಸಭಾಂಗಣದಲ್ಲಿ ನಾಳೆ ಮಹಾತ್ಮಗಾಂಧೀಜಿಯವರ ತತ್ವ ಮತ್ತು ಚಿಂತನೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದೆ.

ಬೆಳಗ್ಗೆ 11 ಗಂಟೆಗೆ ಸಾಂಸ್ಕøತಿಕ ಚಿಂತಕ ಪೆÇ್ರ.ಜಿ.ಕೆ.ಗೋವಿಂದರಾವ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಬೆಂಗಳೂರು ವಿವಿ ಕುಲಸಚಿವ ಪೆÇ್ರ.ಬಿ.ಕೆ.ರವಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು ವಿವಿ ಕುಲಪತಿ ಪೆÇ್ರ.ಕೆ.ಆರ್.ವೇಣುಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಗಾಂಧೀಜಿ ಮತ್ತು ಹಸಿರು ಆರ್ಥಿಕತೆ ಕುರಿತ ವಿಶೇಷ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸವನ್ನು ಪರಿಸರ ಚಿಂತಕ ನಾಗೇಶ್ ಹೆಗಡೆ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕವಿಕಂಡ ಗಾಂಧೀಜಿ ದೃಶ್ಯ ಕಾವ್ಯ ರೂಪಕ ನಡೆಯಲಿದೆ. ಇದಲ್ಲದೆ, ಗಾಂಧೀಜಿ ಚಿಂತನೆಯ ವಿವಿಧ ಮುಖಗಳು ಕುರಿತ ಸಂವಾದ ಏರ್ಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ