ಬೆಂಗಳೂರು, ಅ.22-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಕ್ಟೋಬರ್ 24ರಿಂದ ಐದು ದಿನ ಕಾಲ ವಿದೇಶ ಪ್ರವಾಸಕೈಗೊಳ್ಳಲಿದ್ದಾರೆ.
24ರಂದು ಲಂಡನ್ಗೆ ಪ್ರಯಾಣ ಬೆಳೆಸುವ ಅವರು, 25ರಂದು ಲಂಡನ್ನಲ್ಲಿ ನಡೆಯುವ ಗ್ಲೋಬಲ್ ಅಚೀವರ್ಸ್ ಕನ್ಕ್ಲೇವ್ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 26ರಂದು ಲಂಡನ್ನಲ್ಲೇ ವಾಸ್ತವ್ಯ ಹೂಡುವ ದೇವೇಗೌಡರು, 27ರಂದು ಅಲ್ಲಿಂದ ಹೊರಡಲಿದ್ದು, 28ಕ್ಕೆ ಬೆಂಗಳೂರು ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತೃತೀಯ ರಂಗ ಬೆಂಬಲಿಸಲು ಕರೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಯ ಜವಾಬ್ದಾರಿಯನ್ನು ಪಕ್ಷದ ರಾಜ್ಯದ ನಾಯಕರಿಗೆ ವಹಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ರಾಜ್ಯದ ನಾಯಕರು ಮತ್ತು ಮುಖಂಡರು ಪ್ರಚಾರದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾದರಿಯಲ್ಲಿ ಅನಿವಾಸಿ ಭಾರತೀಯರ ಮನಗೆಲ್ಲಲು ದೇವೇಗೌಡರು ಮುಂದಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.