ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಎ ಮಂಜು ವಾಗ್ದಾಳಿ

ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದಾರಾಮಯ್ಯ ಸುದ್ದಿಗೋಷ್ಟಿ ನೆಡಸಿದ ಬೆನ್ನಲ್ಲೇ ಮಾಜಿ ಸಚಿವ ಎ.ಮಂಜು ವಿರೋಧ ವ್ಯಕ್ತಪಡಿಸಿದ್ದು, ದೇವೇಗೌಡರ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನಾನು ದೇವೇಗೌಡರ ಕುಟುಂಬದ ವಿರೋದಿ, ಹಿಂದಿನಿಂದಿಲೂ ಗೌಡರ ಕುಟುಂಬವನ್ನು ವಿರೋದಿಸಿಕೊಂಡು ಬಂದವನು. ಈಗಲೂ ಅದನ್ನೆ ಮುಂದುವರಿಸುತ್ತೆನೆ. ನಾನು ನನ್ನ ಕಾರ್ಯಕರ್ತರನ್ನು ಉಳಿಸಬೇಕಿದೆ ಎಂದು ಹೇಳಿದ್ದಾರೆ.

ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದವನು ನಾನು. ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸಿದರೆ ನನಗೇನು? ಗೌಡರ ಕುಟುಂಬಕ್ಕೆ ಈ ಬಾರಿ ನನ್ನ ಬೆಂಬಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಷ್ಟು ದಿನ ಗೌಡರನ್ನು ವಿರೋಧ ಮಾಡಿ ಈಗ ಅವರಿಗೆ ಬೆಂಬಲ ನೀಡಿ, ಮತಹಾಕಿ ಎಂದು ನಾನು ನನ್ನ ಕಾರ್ಯಕರ್ತರಿಗೆ ಹೇಗೆ ಹೇಳಲಿ. ನಾನು ಈ ಮೈತ್ರಿಯ ವಿರೋಧಿ. ನನ್ನ ಕಾರ್ಯಕರ್ತರನ್ನು ನಾನು ಉಳಿಸಿಕೊಳ್ಳಬೇಕಿದೆ. ನಾನು ಅವರಿಗೆ ಮತಹಾಕಿ ಎಂದು ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ತಾಲೂಕಿನಲ್ಲಿ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದ್ದರೆ ಅಂತವರನ್ನು ತಾಲೂಕು ಹಾಗೂ ಜಿಲ್ಲೆಯಿಂದಲೇ ಹೊರಗಡೆ ಕಳುಹಿಸಬೇಕಿದೆ ಎಂದು ಅರಕಲಗೂಡು ಶಾಸಕ ಎಟಿ ರಾಮುಸ್ವಾಮೀಗೆ ಟಾಂಗ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ