ಗುವಾಹಟಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ, 5 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಇಂದು ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಜೇಸೆನ್ ಹೋಲ್ಡರ್ ಕ್ಯಾಪ್ಟನ್ಸಿಯ ವಿಂಡೀಸ್ ವಿರುದ್ಧ ಕಣಕ್ಕಿಳಿಯುತ್ತಿದೆ.
ವಿಶ್ವಕಪ್ ಟೂರ್ನಿಗೆ ಪೂರ್ವ ತಯಾರಿ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಂದಿನ ವಿಶ್ವಕಪ್ ಟೂರ್ನಿ ಪೂರ್ವ ತಯಾರಿಯಾಂತಿದ್ದು, ಹಲವು ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಏಷ್ಯಾ ಕಪ್ ಟೂರ್ನಿ ವೇಳೆ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಇನಿಂಗ್ಸ್ ಆರಂಭಿಸಿದ್ರೆ ಅಂಬಟಿ ರಾಯುಡು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಇನ್ನು ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ತಲಕ್ಕೆ ಮರಳುವುದಕ್ಕೆ ಈ ಸರಣಿ ಮತ್ತೊಂದು ಅವಕಾಶವಾಗಿದ್ರೆ, ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಚೊಚ್ಚಲ ಏಕದಿನ ಪಂದ್ಯವನ್ನಾಡಲಿದ್ದಾರೆ. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್, ಮೊಹಮ್ಮದ್ ಶಮಿ ವೇಗದ ದಾಳಿ ಜವಾಬ್ದಾರಿ ವಹಿಸಿದ್ರೆ, ಜಡೇಜಾ, ಕುಲ್ದೀಪ್, ಚಹಲ್ ಸ್ಪಿನ್ ಅಸ್ತ್ರವಾಗಿದ್ದಾರೆ.
ಸ್ಟಾರ್ ಆಟಗಾರರ ಅನುಪಸ್ಥಿತಿ
ಪ್ರವಾಸಿ ವಿಂಡೀಸ್ ತಂಡಕ್ಕೆ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಸ್ಫೋಟಕ ಆಟಗಾರ ಎವಿನ್ ಲಿವೀಸ್ ಸರಣಿಯಿಂದ ಹಿಂದೆ ಸರಿದಿದ್ದು ಕೆರಿಬಿಯನ್ ಪಡೆಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಉಳಿದಂತೆ ಕ್ರಿಸ್ ಗೇಲ್, ರಸೆಲ್, ಸುನಿಲ್ ನರೈನ್ ಗೈರು ಸರಣಿಯುದ್ದಕ್ಕೂ ಪ್ರವಾಸಿಗರನ್ನು ಕಾಡಲಿದೆ. ಉಳಿದಂತೆ ಹಿರಿಯ ಆಟಗಾರ ಸ್ಯಾಮುಯಲ್ಸ್, ನಾಯಕ ಜೇಸನ್ ಹೋಲ್ಡರ್ ಹಾಗೂ ವೇಗಿ ಕೀಮಾರ್ ರೋಚ್ರನ್ನ ತಂಡ ಅವಲಭಿಸಿದೆ.