ಬೆಂಗಳೂರು, ಅ.20-ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಪೆÇಲೀಸರಿಗೆ ಗೌರವ ಸಲ್ಲಿಸಲು ಪೆÇಲೀಸ್ ಸಂಸ್ಮರಣ ದಿನಾಚರಣೆ ನಾಳೆ ಬೆಳಿಗ್ಗೆ 8 ಗಂಟೆಗೆ ಕೋರಮಂಗಲದ ಕೆಎಸ್ಆರ್ಪಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಹುತಾತ್ಮರಾದ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಹಾಗು ಉಪ ಮುಖ್ಯಮಂತ್ರಿ, ರಾಜ್ಯದ ಪೆÇಲೀಸ್ ಮುಖ್ಯಸ್ಥರು ಗೌರವ ಸಮರ್ಪಿಸಲಿದ್ದಾರೆ.
2017ರ ಸೆಪ್ಟಂಬರ್ 1ರಿಂದ 2018 ಆಗಸ್ಟ್ 31ರ ನಡುವಿನ ಅವಧಿಯಲ್ಲಿ ದೇಶಾದ್ಯಂತ ಒಟ್ಟು 414 ವಿವಿಧ ದರ್ಜೆಯ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 15 ಮಂದಿ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಬೆಂಗಳೂರು ಸಿಐಡಿ ಘಟಕದ ಡಿವೈಎಸ್ಪಿ ಬಾಳೇಗೌಡ, ಪೆÇಲೀಸ್ ಇನ್ಸ್ಪೆಕ್ಟರ್ ಶಿವಸ್ವಾಮಿ, ಕಾರವಾರ ಜಿಲ್ಲೆಯ ಎಆರ್ಎಸ್ಐ ರಮೇಶ್ ಪರಮೇಶ್ವರ್ ನಾಯಕ್, ಹಾಸನ ಜಿಲ್ಲೆಯ ಸಿಎಚ್ಸಿ ಕೆ.ವಿ.ಸೋಮಶೇಖರ್, ವಿಜಯಪುರ ಜಿಲ್ಲೆಯ ಸಿಎಚ್ಸಿ ಪರಸಪ್ಪ ಕಾಸಪ್ಪ ಗವಾರಿ, ಕಾರ್ಕಳ ಎಎನ್ಎಫ್ನ ಸಿಎಚ್ಸಿ ಯಶವಂತ ಕುಮಾರ್, ಕೆಎಸ್ಆರ್ಪಿಯ 9ನೆ ಪಡೆಯ ಎಎಚ್ಸಿ ವಿ.ಅಪ್ಪಾಜಿ, ಬ್ಯಾಟರಾಯನಪುರ ಸಂಚಾರ ವಿಭಾಗದ ಸಿಪಿಸಿ ಎಸ್.ವಿ.ರವಿಶಂಕರ್, ಜಯನಗರ ಪೆÇಲೀಸ್ ಠಾಣೆಯ ಸಿಪಿಸಿ ಸಿದ್ದಪ್ಪ ಭೆರವಾಡಗಿ, ಕೆಎಸ್ಐಎಸ್ಎಫ್ನ ಸಿಪಿಸಿ ಕುಮಾರಿ ಮಾನಸ, ಹಾಸನ ಜಿಲ್ಲೆಯ ಸಿಪಿಸಿ ಎ.ಟಿ.ನಾಗರಾಜು, ದಕ್ಷಿಣ ಕನ್ನಡ ಜಿಲ್ಲೆಯ ಸಿಪಿಸಿ ಎಂ.ಹನುಮಂತ, ರಾಮನಗರ ಜಿಲ್ಲೆಯ ಸಿಪಿಸಿ ಎಸ್.ಮಹಲಿಂಗಯ್ಯ, ವಿಜಯಪುರ ಜಿಲ್ಲೆಯ ಸಿಪಿಸಿ ಸುಭಾಷ್ ಮಲ್ಲನಗೌಡ ಪಾಟೀಲ್, ಕಾರವಾರ ಜಿಲ್ಲೆಯ ಮಸಿಪಿ ಮೃದುಲಾ ಆಚಾರ್ಯ ಅವರು ಹುತಾತ್ಮರಾಗಿದ್ದಾರೆ.
ಹುತಾತ್ಮರಾದವರ ನೆನಪಿನಲ್ಲಿ ರಾಷ್ಟ್ರಾದ್ಯಂತ ಪ್ರತಿ ವರ್ಷ ಅಕ್ಟೋಬರ್ 21ರಂದು ಪೆÇಲೀಸ್ ಸಂಸ್ಮರಣ ದಿನಾಚರಣೆಯನ್ನು ಆಚರಿಸಲಾಗುತ್ತದೆ.