ಬೆಂಗಳೂರು, ಅ.20-ಯುವ ಜನಾಂಗದಲ್ಲಿ ಮಾದಕ ವಸ್ತು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪೂರ್ವ ವಿಭಾಗದ ಪೆÇಲೀಸರು ಹೊರ ತಂದಿರುವ ಜಾಗೃತಿ ಚಿತ್ರಗೀತೆಯನ್ನು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಇಂದು ಬಿಡುಗಡೆ ಮಾಡಿದರು.
ನುರಿತ ಕಲಾವಿದರು ವೀಡಿಯೋ ಚಿತ್ರೀಕರಿಸಿದ್ದು, ಯುವಕರು ಹಾಗೂ ಮಾದಕ ವ್ಯಸನಿಗಳು ಜಾಗೃತಿ ಗೀತೆಯಿಂದ ಉತ್ತೇಜನಗೊಂಡು ಮಾದಕ ವಸ್ತು ಬಳಕೆಯಿಂದ ಮುಕ್ತರಾಗಬೇಕು ಎಂಬುದು ಇದರ ಉದ್ದೇಶವಾಗಿದೆ.
ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್, ಪೂರ್ವ ವಿಭಾಗದ ಅಪರ ಪೆÇಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ರಾಹುಲ್ ಕುಮಾರ್ ಶಹಾಪುರವಾಡ ನೇತೃತ್ವದಲ್ಲಿ ಹಲಸೂರು ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಬೈಯ್ಯಪ್ಪನಹಳ್ಳಿ ಪಿಐ ಜಿ.ಪಿ.ರಮೇಶ್ ಅವರ ಸಾರಥ್ಯದಲ್ಲಿ ಈ ಚಿತ್ರಗೀತೆ ರಚಿಸಲಾಗಿದೆ.
ಬೈಯ್ಯಪ್ಪನಹಳ್ಳಿ ಪೆÇಲೀಸ್ ಠಾಣಾ ಬರಹಗಾರ ಸುಬ್ರಮಣಿ ಶಾನುಭೋಗನಹಳ್ಳಿ ಅವರು ಈ ಚಿತ್ರಗೀತೆಯನ್ನು ರಚಿಸಿ, ಹಾಡಿದ್ದಾರೆ. ಸಂಗೀತ ನಿರ್ದೇಶಕ ಬಿ.ಆರ್. ಹೇಮಂತ್ ಕುಮಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಉದಯನಗರದ ಬಿ.ಆರ್.ಸ್ಟುಡಿಯೋದ ಆರ್.ನಿತಿನ್ ಅವರ ಛಾಯಾಗ್ರಹಣದಲ್ಲಿ ಇದು ಮೂಡಿಬಂದಿದೆ.
ಕನ್ನಡ ಚಿತ್ರೋದ್ಯಮದ ಖಳ ನಟರಾದ ಜೋತಿ ರವಿ ತಂಡ, ಪೆÇಲೀಸ್ ಕಾನ್ಸ್ಸ್ಟೇಬಲ್ ವೆಂಕಟೇಶ್, ಹೆಡ್ ಕಾನ್ಸ್ಸ್ಟೇಬಲ್ ಮುಬಾರಕ್ ಅಹ್ಮದ್ ಅವರ ಸಹಯೋಗದೊಂದಿಗೆ ಈ ಜಾಗೃತಿ ಗೀತೆ ರಚಿಸಲಾಗಿದೆ.