ಕೋಲ್ಕತ್ತಾ, ಅ.18-ಗೋವಾದಲ್ಲಿ ಇತ್ತೀಚೆಗೆ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದ್ದಾರೆ. ಇದು ಕಾಂಗ್ರೆಸ್ಗೆ ಹಿನ್ನಡೆಯಲ್ಲ, ಬದಲಿಗೆ ಬಿಜೆಪಿಯ ಹಿನ್ನಡೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.
ಕೋಲ್ಕತ್ತಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿರುವುದು ಕಾಂಗ್ರೆಸ್ಗೆ ಆದ ಹಿನ್ನಡೆ ಎಂದು ಕರೆಯಬಹುದು. ಆದರೆ ಅದು ನಮ್ಮ ಹಿನ್ನಡೆಯಲ್ಲ. ಬಿಜೆಪಿಯು ರಾಜಕೀಯಕ್ಕಾಗಿ ತನ್ನ ಸಿದ್ಧಾಂತಗಳನ್ನೆಲ್ಲ ಮರೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ತಾವು ಅಧಿಕಾರಕ್ಕೆ ಬರುವವರೆಗೆ ಈ ದೇಶದಲ್ಲಿ ಯಾವುದೂ ಸರಿಯಿರಲಿಲ್ಲ ಎಂದು ಹೇಳುವ ಬಿಜೆಪಿಯವರು ಈಗ ಮಾಡುತ್ತಿರುವುದೇನು ಅವರ ನಡೆ ಪ್ರಶ್ನಾರ್ಹವಲ್ಲವೇ? ಎಂದು ಖುರ್ಷಿದ್ ಪ್ರಶ್ನಿಸಿದರು.