ಶೌಚಾಲಯ ಶುಚಿಗೊಳಿಸುವ ಮಹಿಳೆಯ ಮೇಲೆ ಅತ್ಯಾಚಾರ

ಬೆಂಗಳೂರು, ಅ.18- ಸಾಫ್ಟ್‍ವೇರ್ ಸಂಸ್ಥೆಯೊಂದರಲ್ಲಿ ಶೌಚಾಲಯ ಶುಚಿಗೊಳಿಸುವ ಪರಿಚಾರಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಹೌಸ್ ಕೀಪಿಂಗ್ ಮೇಲ್ವಿಚಾರಕನನ್ನು ಮಾರತ್ತಹಳ್ಳಿ ಪೆÇಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ಮೋಹನ್‍ಬಾಬು (27) ಬಂಧಿತ ಆರೋಪಿ.

ಮಾರತ್ತಹಳ್ಳಿ ವ್ಯಾಪ್ತಿಯಲ್ಲಿರುವ ಸಾಫ್ಟ್‍ವೇರ್ ಸಂಸ್ಥೆಯೊಂದರಲ್ಲಿ ಮೋಹನ್‍ಬಾಬು ಹೌಸ್ ಕೀಪಿಂಗ್ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಅದೇ ಸಂಸ್ಥೆಯಲ್ಲಿ ಶೌಚಾಲಯ ಶುಚಿಗೊಳಿಸುವ ಪರಿಚಾರಕಿಯಾಗಿದ್ದ 25 ವರ್ಷದ ಮಹಿಳೆಗೆ ಮೋಹನ್‍ಬಾಬು ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಆದರೆ, ಆರೋಪಿಯ ಲೈಂಗಿಕ ಚೇಷ್ಟೆಗೆ ಸೊಪ್ಪು ಹಾಕದ ಮಹಿಳೆ ಮೇಲೆ ಕಣ್ಣು ಹಾಕಿದ ಕಾಮುಕ ಮೋಹನ್‍ಬಾಬು ಆಕೆ ಮೇಲೆ ಅತ್ಯಾಚಾರ ನಡೆಸಲು ಸಂಚು ರೂಪಿಸಿದ್ದ.

ಯಾರೂ ಇಲ್ಲದ ಸಮಯದಲ್ಲಿ ಸಂತ್ರಸ್ತೆಯನ್ನು ಶೌಚಾಲಯ ಶುಚಿಗೊಳಿಸುವಂತೆ ಸೂಚಿಸಿ ಹಿಂದಿನಿಂದ ಒಳ ಪ್ರವೇಶಿಸಿದ ಮೋಹನ್‍ಬಾಬು ಚಿಲಕ ಹಾಕಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಸಂತ್ರಸ್ತೆ ನೀಡಿದ ದೂರು ದಾಖಲಿಸಿಕೊಂಡ ಮಾರತ್ತಹಳ್ಳಿ ಪೆÇಲೀಸರು ಕಾಮುಕ ಮೋಹನ್‍ಬಾಬುವನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ