ಭೋಪಾಲ್,ಅ.18- ಟ್ರಕ್ ಹಾಗೂ ರಾಜಧಾನಿ ಎಕ್ಸ್ಪ್ರೆಸ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಟ್ರಕ್ ಚಾಲಕ ಮೃತಪಟ್ಟರೆ, ದಿಲ್ಲಿಯತ್ತ ತೆರಳುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ನ ಕನಿಷ್ಠ ಎರಡು ಬೋಗಿಗಳು ಹಳಿ ತಪ್ಪಿವೆ.
ಇಂದು ಮುಂಜಾನೆ 6:44ರ ಸುಮಾರಿಗೆ ಗೋದ್ರಾ ಹಾಗೂ ರತ್ಲಾಮ್ ನಡುವಿನ ತಿರುವಿನಲ್ಲಿ ವೇಗವಾಗಿ ಬಂದ ಟ್ರಕ್ ತ್ರಿವೆಂದ್ರಂ ರಾಜಧಾನಿ ರೈಲಿಗೆ ಗುದ್ದಿದ್ದರಿಂದ ಚಾಲಕ ಸಾವನ್ನಪ್ಪಿದ್ದಾನೆ.
ಕ್ರಾಸಿಂಗ್ ಮುಚ್ಚಿದ್ದ ವೇಳೆ ವೇಗವಾಗಿ ನುಗ್ಗಿದ ಟ್ರಕ್ ರೈಲಿಗೆ ಗುದ್ದ ಪರಿಣಾಮ ರೈಲಿನ ಎರಡು ಬೋಗಿಗಳೂ ಹಳಿತಪ್ಪಿವೆ. ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ಹಾನಿಗೊಂಡ ಎರಡು ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಇತರೆ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ. ಎರಡು ಬೋಗಿಗಳನ್ನು ಅಲ್ಲಿಯೇ ಬಿಟ್ಟು, ರೈಲು ಪ್ರಯಾಣ ಮುಂದುವರೆಸಿತು.
ಘಟನೆ ಸ್ಥಳದಲ್ಲಿ ಆದಷ್ಟು ಬೇಗ ದುರಸ್ತಿ ಕಾರ್ಯ ನಡೆಯಲಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.