ಮಲ್ಲೇಶ್ವರಂ ವ್ಯಾಪ್ತಿಯ 7ನೇ ಕ್ರಾಸ್ನಲ್ಲಿ ನವರತ್ನ ಬ್ಯೂಟಿ ಅಂಡ್ ವೆನ್ನೆಸ್ ಸೆಂಟರ್ ಹೆಸರಿನಲ್ಲಿ ಹ್ಯಾಪಿ ಎಂಡಿಂಗ್ ಎಂಬಿತ್ಯಾದಿ ಮಸಾಜ್ಗಳ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಮಹಿಳೆಯನ್ನು ಬಂಧಿಸಿದ್ದಾರೆ.
ದಾಳಿ ವೇಳೆ ಕೋಲ್ಕತ್ತಾ ಮೂಲದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ರಕ್ಷಿಸಿ ಆರೋಪಿಯಿಂದ 4 ಸಾವಿರ ಹಣ, ಮೊಬೈಲ್, ಸ್ವೈಪಿಂಗ್ ಮೆಷಿನ್ನನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ಮಲ್ಲೇಶ್ವರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ