ಬ್ಯೂನಸ್ ಏರಿಸ್, ಅ.18 -ಅರ್ಜೆಂಟೈನಾದಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ನಲ್ಲಿ ಭಾರತದ ಆಕಾಶ್ ಮಾಲಿಕ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕ್ರೀಡಾಕೂಟದ ಆರ್ಚರಿ(ಬಿಲ್ಲುಗಾರಿಕೆ) ವಿಭಾಗದಲ್ಲಿ ಭಾರತಕ್ಕೆ ಪ್ರಥಮ ರಜತ ಗೆದ್ದುಕೊಟ್ಟ ಕೀರ್ತಿಗೆ ರೈತನ ಮಗ ಆಕಾಶ್ ಪಾತ್ರರಾಗಿದ್ದಾರೆ.
ಇದರೊಂದಿಗೆ ಯೂತ್ ಒಲಿಂಪಿಕ್ಸ್ನಲ್ಲಿ ಭಾರತ ಒಟ್ಟು ಮೂರು ಚಿನ್ನ, ಒಂಭತ್ತು ಬೆಳ್ಳಿ ಹಾಗೂ ಒಂದು ಕಂಚು ಪದಕ ಗಳಿಸಿದೆ.
15 ವರ್ಷದ ಆಕಾಶ್ ಫೈನಲ್ನಲ್ಲಿ ಅಮೆರಿಕದ ಟ್ರೆನ್ಟನ್ ಕೌಲೆಸ್ ವಿರುದ್ಧ ಪರಾಭವಗೊಂಡರೂ, ಅವರು ಮಾಡಿದ ರಜತ ಸಾಧನೆ ದೊಡ್ಡದು.