ಬೆಂಗಳೂರು,ಅ.18-ಬಹು ನಿರೀಕ್ಷೆಯ ದಿ ವಿಲನ್ ಚಿತ್ರ ರಾಜ್ಯದ 400ಕ್ಕೂ ಹೆಚ್ಚು ಚಿತ್ರಮಂದಿಗಳು ಸೇರಿದಂತೆ ದೇಶ, ವಿದೇಶಗಳಲ್ಲೂ ಇಂದೇ ಬಿಡುಗಡೆ ಕಂಡಿದ್ದುಯಶಸ್ವಿ ಪ್ರದರ್ಶನ ಕಾಣುತ್ತಿದೆ.
ದಸರಾ ಹಬ್ಬದೊಂದಿಗೆ ವಿಲನ್ ಹಬ್ಬವೂ ಚಿತ್ರಮಂದಿರಗಳಲ್ಲಿ ಆರಂಭವಾಗಿದ್ದು, ನಾಯಕ ನಟರಾದ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ ನಟನೆಯ ಈ ಚಿತ್ರವನ್ನು ನೋಡಲು ಬೆಳಗ್ಗೆನಿಂದಲೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ದಂಡೇ ನೆರೆದಿದೆ.
ನಾಡಹಬ್ಬ ದಸರಾ ಸಂಭ್ರಮದ ನಡುವೆಯೂ ಕಲಾರಸಿಕರು ಚಿತ್ರಮಂದಿರಗಳ ಮುಂದೆ ಕಾದು ನಿಂತಿದ್ದು, ಕಳೆದ ಒಂದು ತಿಂಗಳ ಹಿಂದೆಯೇ ಬುಕಿಂಗ್ಗೆ ಅವಕಾಶ ನೀಡಲು ಚಿತ್ರತಂಡ ನಿರ್ಧರಿಸಿತ್ತು.
ಆದರೆ ಶಿವರಾಜ್ಕುಮಾರ್ ಅವರ ಇಚ್ಛೆಯಂತೆ ಒಂದು ವಾರದ ಹಿಂದಿನಿಂದ ಚಿತ್ರದ ಟಿಕೆಟ್ಗಳ ಬುಕಿಂಗ್ ಆರಂಭಗೊಂಡಿತ್ತು. ಹಲವಾರು ಮುಂದೆ ಆನ್ಲೈನ್ ಮೂಲಕ ಬುಕಿಂಗ್ ಮಾಡಿಕೊಂಡು ಇಂದು ಚಿತ್ರ ವೀಕ್ಷಿಸಿದ್ದಾರೆ.
ಹಲವಾರು ವಿಶೇಷಗಳನ್ನೊಳಗೊಂಡಿರುವ ಈ ಚಿತ್ರ ಕಥೆ, ಆ್ಯಕ್ಷನ್, ತಾಯಿ ಸೆಂಟಿಮೆಂಟ್ನೊಂದಿಗೆ ಹೆಚ್ಚು ಸುದ್ದಿ ಮಾಡಿತು. ವಿಭಿನ್ನ ಕೇಶ ವಿನ್ಯಾಸದಲ್ಲಿ ಇಬ್ಬರು ನಾಯಕ ನಟರು ಕಾಣಿಸಿಕೊಂಡಿರುವ ಚಿತ್ರದಲ್ಲಿ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್, ಬಾಲಿವುಡ್ನ ಸುಪ್ರಸಿದ್ದ ನಟ ಮಿಥುನ್ ಚಕ್ರವರ್ತಿ ಸೇರಿದಂತೆ ಹಲವು ಪ್ರಮುಖರು ಪಾತ್ರ ವರ್ಗದಲ್ಲಿದ್ದಾರೆ.
ಚಿತ್ರ ಹಾಲಿವುಡ್ ರೇಂಜ್ನಲ್ಲಿ ಅದ್ಧೂರಿಯಾಗಿ ಮೂಡಿ ಬಂದಿದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹಳ್ಳಿಯ ಮುಗ್ದ ಹುಡುಗನ ಪಾತ್ರದೊಂದಿಗೆ ಅಂಡರ್ ವಲ್ರ್ಡ್ನ ಸಂಪರ್ಕ ಹೊಂದುವ ಚಿತ್ರದ ಎಳೆಯಲ್ಲಿ ಇಂದಿನ ಕಲಾ ಪ್ರೇಕ್ಷಕರಿಗೆ ಬೇಕಿರುವ ಎಲ್ಲ ಆಕರ್ಷಕ ಅಂಶಗಳು ಒಳಗೊಂಡಿದೆ ಎಂದು ಹೇಳಲಾಗಿದೆ.
ಬಹಳ ದಿನಗಳಿಂದ ಸದ್ದು ಮಾಡಿದ್ದಚಿತ್ರ ಇಂದು ಮಲ್ಟಿಪ್ಲೆಕ್ ಸೇರಿದಂತೆ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಟಿಕೆಟ್ ದರ ಹೆಚ್ಚಾಗಿರುವ ನಡುವೆಯೂ ಪ್ರೇಕ್ಷಕರ ಕೊರತೆ ಎದುರಾಗಿಲ್ಲ. ಮಧ್ಯರಾತ್ರಿಯಿಂದಲೇ ಟಿಕೆಟ್ಗಾಗಿ ಕಾದು ನಿಂತು ಹಬ್ಬದ ದಿನವೂ ಚಿತ್ರಮಂದಿರಕ್ಕೆ ಅಭಿಮಾನಿಗಳು ದೌಡಾಯಿಸಿದ್ದಾರೆ.