ಮೀಸಲಾಯಿತಿ ಕಾಯ್ದೆ ಜಾರಿ ವಿಚಾರ, ಸುಪ್ರೀಂ ಆದೇಶ ಕಾಪಾಡುವಂತೆ ಅಹಿಂಸಾ ಒತ್ತಾಯ

ಬೆಂಗಳೂರು, ಅ.17- ಬಡ್ತಿ ಮೀಸಲಾತಿ ಕಾಯ್ದೆ ಜಾರಿ ವಿಚಾರದಲ್ಲಿ ಸುಪ್ರೀಂಕೋರ್ಟ್‍ನ ಆದೇಶದಂತೆ ಯಥಾಸ್ಥಿತಿ ಕಾಪಾಡುವಂತೆ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಸರ್ಕಾರದ ವಿವಿಧ ಇಲಾಖೆಗಳು ನಿವೃತ್ತ/ ಸೇವಾ ನಿರತ ಹಿತರಕ್ಷಣಾ ಒಕ್ಕೂಟ) ಒತ್ತಾಯಿಸಿದೆ.

ಸುಪ್ರೀಂಕೋರ್ಟ್‍ನ ಆದೇಶದಂತೆ ಯಥಾಸ್ಥಿತಿ ಕಾಪಾಡದೆ ಪರಿಶಿಷ್ಟ ಜಾತಿ, ವರ್ಗದ, ಸಚಿವರ ಒತ್ತಾಯದ ಮೇರೆಗೆ ಕಾಯ್ದೆ ಜಾರಿ ಮಾಡಿದರೆ ರಾಜ್ಯಾದ್ಯಂತ ಇರುವ 10ಲಕ್ಷಕ್ಕೂ ಹೆಚ್ಚು ನಿವೃತ್ತ ಹಾಗೂ ಕಾರ್ಯನಿರತ ನೌಕರರಿಂದ ಅಸಹಕಾರ ಚಳವಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ನಾಗರಾಜು ಎಚ್ಚರಿಸಿದ್ದಾರೆ.

ಸುಪ್ರೀಕೋರ್ಟ್‍ನಲ್ಲಿ 2017ರ ಫೆ.9ರಂದು ಸಾಮಾನ್ಯ ವರ್ಗದವರಿಗೆ ನ್ಯಾಯ ದೊರಕಿದೆ.ಸುಪ್ರೀಂಕೋರ್ಟ್ ಬಡ್ತಿ ಮೀಸಲಾತಿಯನ್ನು ರದ್ದು ಪಡಿಸಿಲ್ಲ. ಆದರೆ, ವೇಗೋತ್ಕರ್ಷ ಜ್ಯೇಷ್ಠತೆಯನ್ನು ನೀಡಲು ಬರುವುದಿಲ್ಲ ಎಂದು ತಿಳಿಸಿದೆ.

ಅಹಿಂಸಾ 2018ರ ಅ.12ರಂದು ಎರಡು ಅರ್ಜಿಗಳನ್ನು ವಿಚಾರಣೆಗಾಗಿ ಸಲ್ಲಿಸಿತ್ತು.ಇದರಲ್ಲಿ ಮೀಸಲಾತಿ ವರ್ಗ ಮತ್ತು ಅಹಿಂಸಾ ಪರವಕೀಲರು ವಾದ ಮಂಡಿಸಿದ್ದರು.ಸರ್ಕಾರ ಕಾಯ್ದೆ ಮಾಡಲು ಅವಕಾಶ ನೀಡಲು ಒತ್ತಾಯಿಸಿತ್ತು.ಆದರೆ, ನ್ಯಾಯಾಲಯ ಯಾವ ವಾದಕ್ಕೂ ನಿರ್ದಿಷ್ಟ ಆದೇಶ ನೀಡದೆ ಅ.23ರಕ್ಕೆ ಅಂತಿಮ ವಿಚಾರಣೆ ನಿಗದಿ ಪಡಿಸಿದೆ.

ಇದನ್ನೇ ತಪ್ಪಾಗಿ ತಿಳಿದು ಸುಪ್ರೀಂಕೋರ್ಟ್ ಕಾಯ್ದೆ ಜಾರಿಗೆ ಅವಕಾಶ ನೀಡಿದೆ ಎಂದು ಸಚಿವರು ಅಧಿಕಾರಿಗಳ ಮೇಲೆ ಒತ್ತಾಯ ತರುತ್ತಿದ್ದಾರೆ.ಆದರೆ, ಈ ರೀತಿಯ ಯಾವುದೇ ಆದೇಶವನ್ನು ಸುಪ್ರೀಂಕೋರ್ಟ್ ನೀಡಿಲ್ಲ. ಹಾಗಾಗಿ ಹಿಂದಿನ ಆದೇಶದಂತೆ ಯಥಾಸ್ಥಿತಿ ಕಾಪಾಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾಜ್೵
ಬೆಂಗಳೂರು, ಅ.17- ಕಳೆದ ಎರಡು ದಿನಗಳಿಂದ ವೈರಲ್ ಫೀವರ್‍ನಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಆರೋಗ್ಯವಾಗಿದ್ದು, ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜ್ವರ, ಮೈಕೈ ನೋವಿನಿಂದ ಶಿವಣ್ಣ ಸೋಮವಾರ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಶಿವರಾಜ್‍ಕುಮಾರ್ ಅವರಿಗೆ ಚಿಕಿತ್ಸೆ ನೀಡಿ 48 ಗಂಟೆವರೆಗೂ ಜ್ವರ ಮರುಕಳಿಸದಿದ್ದರೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರು.

ಜ್ವರ ಮರುಕಳಿಸದ ಕಾರಣ ಇಂದು ಮಧ್ಯಾಹ್ನ ಶಿವರಾಜ್‍ಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇನ್ನೂ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಇದೇ ವೇಳೆ ವೈದರು ಸೂಚಿಸಿದ್ದಾರೆ.

ನಾಳೆ ಬಹುನಿರೀಕ್ಷಿತ ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ನಟನೆಯ ದಿ ವಿಲನ್ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರದಲ್ಲೇ ಅಭಿಮಾನಿಗಳ ಜತೆಗೂಡಿ ಚಿತ್ರ ವೀಕ್ಷಿಸುವುದಾಗಿ ಶಿವಣ್ಣ ಹೇಳಿಕೊಂಡಿದ್ದರು.
ಆದರೆ, ವಿಶ್ರಾಂತಿಯ ಅಗತ್ಯವಿರುವುದರಿಂದ ಅಭಿಮಾನಿಗಳೊಂದಿಗೆ ಶಿವಣ್ಣ ಚಿತ್ರ ವೀಕ್ಷಿಸುವುದು ಡೌಟ್.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ