ಶಬರಿಮಲೆಗೆ ಸ್ತ್ರೀ ಶಕ್ತಿ: ಮಹಿಳೆಯರಿದ್ದ ವಾಹನಗಳ ಮೇಲೆ ಉದ್ರಿಕರಿಂದ ಕಲ್ಲು ತೂರಾಟ

ತಿರುವನಂತಪುರಂಕೇರಳದ ಶಬರಿಮಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಪೂಜೆ ಶುರುವಾಗ್ತಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದೆ. ಶಬರಿಮಲೆ ಪ್ರವೇಶಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನ ಸಿಎಂ ಪಿಣರಾಯ್‌ ವಿಜಯನ್​ ಅನುಷ್ಠಾನಗೊಳಿಸಿದ್ದಾರೆ. ಶಬರಿಮಲೆಗೆ ತೆರಳುವ ಎಲ್ಲ ಭಕ್ತರಿಗೂ ಪೂಜೆ ಸಲ್ಲಿಸಲು ಸರ್ಕಾರ ವ್ಯವ್ಯಸ್ಥೆ ಮಾಡಿದೆ. ಪ್ರವೇಶದ ಅವಕಾಶದ ವಿರುದ್ಧ ಪ್ರತಿಭಟನೆಗಳು, ಬೆದರಿಕೆಗಳು ಮತ್ತು ರಾಜಕೀಯ ಮೇಲಾಟದ ನಡುವೆಯೇ ಶಬರಿಮಲೆ ಸುತ್ತಲಿನ ಪ್ರದೇಶದಲ್ಲಿ ಬಿಗುವಿನ ವಾತಾವರಣ ನೆಲೆಸಿದೆ.
ಮಹಿಳೆಯ ಪ್ರವೇಶಕ್ಕೆ ವಿರೋಧಿಸಿ ಬಿಜೆಪಿ ಸೇರಿ ಹಲವು ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿವೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ಪ್ರತಿಭಟಿಸ್ತಿದ್ದಾರೆ. ಶಬರಿಮಲೆಗೆ ಬರ್ತಿರೋ ಬಸ್ಸು, ಕಾರು ಸೇರಿದಂತೆ ವಿವಿಧ ವಾಹನಗಳನ್ನ ಚೆಕ್‌ ಮಾಡಲಾಗ್ತಿದೆ. ಒಂದು ವೇಳೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಕಂಡುಬಂದ್ರೆ ಬಲವಂತವಾಗಿ ವಾಪಸ್‌ ಕಳಿಸಲಾಗ್ತಿದೆ. ಇದಕ್ಕಾಗಿ ಮಹಿಳೆಯರೇ ಟೊಂಕ ಕಟ್ಟಿ ನಿಂತಿದ್ದು, ಶಬರಿಮಲೆ ರಕ್ಷಿಸಿ ಹೋರಾಟವನ್ನ ತೀವ್ರಗೊಳಿಸಿದ್ದಾರೆ. ಇಂದು ತೃಪ್ತಿ ದೇಸಾಯಿ ಟೀಂ ಕೂಡಾ ಶಬರಿಮಲೆ ಪ್ರವೇಶಕ್ಕೆ ಬರಲು ಸಜ್ಜಾಗಿದೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ