ಸ್ಪರ್ಷ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್ ನಿವಾರಣಾ ಜಾಗೃತಿ ತಂಡದ ಸಭೆ

ಬೆಂಗಳೂರು, ಅಕ್ಟೋಬರ್ 2018: ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಸ್ಪರ್ಷ ಆಸ್ಪತ್ರೆ ಇತ್ತೀಚೆಗೆ ಸ್ತನ ಕ್ಯಾನ್ಸರ್ ಪೀಡಿತರ ನೆರವು ತಂಡದ ಸಭೆಯನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಸ್ತನ ಕ್ಯಾನ್ಸರ್ನಿಂದ ಮುಕ್ತಿ ಹೊಂದದ ಕೆಲವರು ಭಾಗಿಯಾಗಿ, ಮಾರಣಾಂತಿಕ ಕಾಯಿಲೆಯನ್ನು ಎದುರಿಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಭೆಯಲ್ಲಿ ಸ್ತನ ಕ್ಯಾನ್ಸರ್ ಕುರಿತ ಜಾಗೃತಿಯ ಅಗತ್ಯ, ವಾರ್ಷಿಕ ತಪಾಸಣೆ ಹಾಗೂ ಜೀವನ ಶೈಲಿಯ ಬದಲಾವಣೆ ಕುರಿತು ಕೂಡ ಚರ್ಚೆ ನಡೆಸಲಾಯಿತು.


ಯಶವಂತಪುರದ ಸ್ಪರ್ಷ ಆಸ್ಪತ್ರೆಯ ಸ್ತನ ಕ್ಯಾನ್ಸರ್ ತಜ್ಞೆ ಹಾಗೂ ಆಂಕೋಲಜಿಸ್ಟ್ ಡಾ. ಜಯಂತಿ ಎಸ್. ತುಮ್ಸಿ, ಕ್ಯಾನ್ಸರ್ಗೆ ಲಿಂಗ ಬೇಧವಿಲ್ಲ. ಆದರೆ, ಹೆಣ್ಣುಮಕ್ಕಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅನೇಕರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದೆ. ಪುರುಷರು ಕೂಡ ಸ್ತನ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆಯಿದೆ. ಆದರೆ, ಅದು ಅಷ್ಟೊಂದು ಗಂಭೀರ ಪ್ರಮಾಣದಲ್ಲಿಲ್ಲ ಎಂದರು.
30 ವರ್ಷ ಮೀರಿದ ಮಹಿಳೆಯರು ಪ್ರತಿ ತಿಂಗಳಿಗೊಮ್ಮೆ ಸ್ತನಗಳ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. 40 ವರ್ಷ ಮೀರಿದ ಮಹಿಳೆಯರು ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್ ತಪಾಸಣೆಗೆ ಒಳಪಟ್ಟಲ್ಲಿ ಸ್ತನ ಕ್ಯಾನ್ಸರ್ನ ಲಕ್ಷಣಗಳಿದ್ದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕಂಡು ಹಿಡಿಯಬಹುದು. ಆರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆಯಾದಲ್ಲಿ ಚಿಕಿತ್ಸೆ ಸುಲಭವಾಗುತ್ತದೆ ಹಾಗೂ, ಸಂಪೂರ್ಣ ಚೇತರಿಕೆಯ ಭರವಸೆ ನೀಡಬಹುದು ಎಂದರು.
30 ವರ್ಷ ಮೀರಿದ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆಯಿರುವುದರಿಂದ ಆಗಾಗ ಸ್ತನದಲ್ಲಿ ಗಂಟುಗಳು ಇಲ್ಲವೇ ಇತರ ಅಸಹಜ ಬೆಳವಣಿಗೆಯಿದೆಯೇ ಎಂಬುದರ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಋತುಚಕ್ರದ ಏಳನೇ ದಿನದ ನಂತರ ಈ ತಪಾಸಣೆ ನಡೆಸುವುದು ಸಊಕ್ತ.
ಎಲ್ಲ ವರ್ಗದ ಮಹಿಳೆಯರು ಈ ಸ್ತನ ಕ್ಯಾನ್ಸರ್ಗೆ ತುತ್ತಾಗುತ್ತಿತ್ತು, ಜಾಗೃತಿಯ ಕೊರತೆಯಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಜೊತೆಗೆ, ಸೂಕ್ತ ತಪಾಸಣೆಯ ಕೊರತೆ ಹಾಗೂ ಈ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಕೆಗಳು ಕೂಡ ಇದಕ್ಕೆ ಕಾರಣವಾಗಿವೆ. ಇಂತಹವರಿಗೆ ನೆರವಾಗಲು ಸ್ಪರ್ಷ ಆಸ್ಪತ್ರೆ ಉಚಿತ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಹಮ್ಮಿಕೊಂಡಿದೆ. ತಪಾಸಣಾ ಹಂತದ ನಂತರ ಅಗತ್ಯವಿದ್ದಲ್ಲಿ ಮ್ಯಾಮೋಗ್ರಾಮ್ ಅನ್ನು ಉಚಿತವಾಗಿ ನಡೆಸಲಾಗುವುದು.

ಸ್ಪರ್ಷ ಆಸ್ಪತ್ರೆ ಕುರಿತು:
ಸ್ಪರ್ಷ ಆಸ್ಪತ್ರೆ ಕ್ಲಿನಿಕಲ್ ಪ್ರಾವಿಣ್ಯತೆ ಹಾಗೂ ಸಾಮಾಜಿಕ ಪ್ರಸ್ತುತತೆಗೆ ಬದ್ಧವಾಗಿದೆ. ಸಮಾಜದ ಬದಲಾವಣೆ ಹಾಗೂ ಸಕಾರಾತ್ಮಕ ಪ್ರಭಾವ ಬೀರುವುದು ನಮ್ಮ ಮೂಲಭೂತ ಉದ್ದೇಶ. ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಡವರಿಗೆ ಕೈಗೆಟಕುವ ದರದಲ್ಲಿ ಒದಗಿಸುವುದು ನಮ್ಮ ಜವಾಬ್ದಾರಿಯೆಂದು ಪರಿಗಣಿಸಿದ್ದೇವೆ. ಕಳೆದ 12 ವರ್ಷಗಳ ಅಲ್ಪ ಅವಧಿಯಲ್ಲಿ ನಾವು ಸಾಕಷ್ಟು ಹೆಮ್ಮೆ ಪಡುವ ಸಾಧನೆ ಮಾಡಿದ್ದೇವೆ. ಇಂದು ನಾವು ಯಶವಂತಪುರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಹೆಮ್ಮೆ ನಮಗಿದೆ. (ಮೇ 2015ರಂದು ಆರಂಭ). ಸ್ಪರ್ಷ ಆಸ್ಪತ್ರೆ ಈಗ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ವಿವಿಧ ವಿಭಾಗದ ತಜ್ಞರನ್ನು ಒಳಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ