ಬೆಂಗಳೂರು,ಅ.17-ಓಎಲ್‍ಎಕ್ಸ್‍ನಲ್ಲಿ ಹಾಕಿರುವ ದ್ವಿಚಕ್ರ ವಾಹನಗಳ ಮಾರಾಟದ ಜಾಹೀರಾತು ವೀಕ್ಷಿಸಿ ಪರೀಕ್ಷಾರ್ಥ ಚಾಲನೆಗಾಗಿ ಅವುಗಳನ್ನು ಪಡೆದು ಕಳವು ಮಾಡಿಕೊಂಡು ಹೋಗುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೆÇಲೀಸರು 12 ಲಕ್ಷ ರೂ. ಮೌಲ್ಯದ ದುಬಾರಿ ಬೆಲೆಯ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಂಕದಕಟ್ಟೆಯ ನಾಗರಹೊಳೆ ನಗರದ ಮುನೇಶ್ವರ ಲೇಔಟ್‍ನ 4ನೇ ಕ್ರಾಸ್ ನಿವಾಸಿ ಮಂಜುನಾಥ ಹೆಗಡೆ(20) ಬಂಧಿತ ಆರೋಪಿ.
ಈತ ಓಎಲ್‍ಎಕ್ಸ್‍ನಲ್ಲಿನ ಜಾಹಿರಾತುಗಳನ್ನು ವೀಕ್ಷಿಸಿ ದ್ವಿಚಕ್ರ ವಾಹನದ ಮಾಲೀಕರನ್ನು ಸಂಪರ್ಕಿಸುತ್ತಿದ್ದ. ವಾಹನ ಖರೀದಿಸುತ್ತೇನೆ ಎಂದು ಹೇಳಿ, ಪರೀಕ್ಷಾರ್ಥ ಚಾಲನೆಗಾಗಿ ವಾಹನಗಳನ್ನು ಪಡೆದು ಪರಾರಿಯಾಗುತ್ತಿದ್ದ.
ಈ ಬಗ್ಗೆ ವಾಹನ ಕಳೆದುಕೊಂಡವರು ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಪೆÇಲೀಸರು ಆರೋಪಿಯನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ ಕೆಟಿಎಂ, ರಾಯಲ್ ಎನ್‍ಫೀಲ್ಡ್ ಕಂಪನಿಯ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈತನ ಬಂಧನದಿಂದ ಆರು ಪ್ರಕರಣಗಳು ಪತ್ತೆಯಾಗಿವೆ.ಪ್ರತಿ ಬಾರಿ ಕಳವು ಮಾಡಲು ಬೇರೆ ಬೇರೆ ಸಿಮ್‍ಗಳನ್ನು ಬಳಸುತ್ತಿದ್ದ.ಒಮ್ಮೆ ಬಳಸಿದ ಸಿಮ್‍ನ್ನು ಮತ್ತೆ ಬಳಸುತ್ತಿರಲಿಲ್ಲ.
ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಮೇಶ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್‍ಸಿಟಿ ಪೆÇಲೀಸ್ ಇನ್‍ಸ್ಪೆಕ್ಟರ್ ಮಲ್ಲೇಶ್ ನೇತೃತ್ವದಲ್ಲಿ ಸಬ್‍ಇನ್‍ಸ್ಪೆಕ್ಟರ್‍ಗಳಾದ ಸಂಜೀವ ಗುರಪ್ಪ ಗೋಳ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.