ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಮೂರನೇ ಓಪನರ್ ಮತ್ತು ಬ್ಯಾಕ್‍ಅಪ್ ವಿಕೆಟ್ ಕೀಪರ್ ಯಾರೆಂಬುದೇ ಆಡಳಿತ ಮಂಡಳಿ ಮತ್ತು ಆಯ್ಕೆ ಮಂಡಳಿಗೆ ದೊಡ್ಡ ಸಮಸ್ಯೆಯಾಗಿದೆ.
ಡಿಸೆಂಬರ್ 6ರಿಂದ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊನ್ನೆ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರಿಂದ ಅಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಆಯ್ಕೆ ಖಚಿತ ಎಂದು ತಿಳಿದು ಬಂದಿದೆ. ಆದರೆ ಮೂರನೇ ಮತ್ತು ಮತ್ತೋರ್ವ ಹೆಚ್ಚುವರಿ ವಿಕೆಟ್ ಕೀಪರ್ ಯಾರೆಂಬುದೇ ಬಿಸಿಸಿಐಗೆ ದೊಡ್ಡ ತಲೆ ನೋವಾಗಿದೆ. ಓಪನರ್ ಕೆ.ಎಲ್. ರಾಹುಲ್ 17 ಇನ್ನಿಂಗ್ಸ್‍ಗಳಲ್ಲಿ 14 ಇನ್ನಿಂಗ್ಸ ಗಳಲ್ಲಿ ವಿಫಲರಾಗಿದ್ದರು ಆಯ್ಕೆ ಮಂಡಳಿ ರಾಹುಲ್‍ಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಇದೆ.ಜೊತೆಗೆ ನಾಯಕ ಕೊಹ್ಲಿ ರಾಹುಲ್ ಬೆನ್ನಿಗೆ ನಿಂತಿದ್ದರೆ. ಇನ್ನು ತಮಿಳುನಾಡು ಬ್ಯಾಟ್ಸ್‍ಮನ್ ಮುರಳಿ ವಿಜಯ್ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸರಣಿಗಳಲ್ಲಿ ವಿಫಲರಾಗಿದ್ದರಿಂದ ಮಯಾಂಕ್ ಅಗರ್‍ವಾಲ್ ಮೂರನೇ ಓಪನರ್‍ರಾಗಿ ಆಡಬಹುದಾ ಎಂಬುದೇ ಪ್ರಶ್ನೆಯಾಗಿದೆ.