ದುಬೈ: ಆರು ಎಸೆತದಲ್ಲಿ ಆರು ಸಿಕ್ಸ್, 12 ಎಸೆತದಲ್ಲಿ ಅರ್ಧ ಶತಕ ಒಂದೇ ಓವರ್ನಲ್ಲಿ ಬರೋಬ್ಬರಿ 37 ರನ್ ಇದ್ಯಾವುದೋ ಗಲ್ಲಿ ಕ್ರಿಕೆಟ್ನಲ್ಲಿ ಆಡಿದ ಸ್ಕೋರ್ ಅಲ್ಲ ಇದು ಚೊಚ್ಚಲ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ದಾಖಲಾದ ವಿನೂತನ ದಾಖಲೆ.
ಈ ದಾಖಲೆ ಬರೆದವರು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್ಮನ್ ಹಜರತ್ ಉಲ್ಲ ಝಜೈ. ಲೀಗ್ನಲ್ಲಿ ಬಲ್ಕ್ ಜವಾನ್ ಪರ ಆಡುತ್ತಿರುವ ಹಜರತ್ ಉಲ್ಲ ಬಲ್ಕ್ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎದುರಾಳಿ ಸ್ಪಿನ್ನರ್ ಅಬ್ದುಲ್ಲಾ ಮಜಾರಿ ವಿರುದ್ದ ಆರು ಎಸೆತದಲ್ಲಿ ಆರು ಸಿಕ್ಸ್ ಬಾರಿಸಿ ಅಚ್ಚರಿ ಮುಡಿಸಿದರು.
ಯುವಿ ದಾಖಲೆ ಸರಿಗಟ್ಟಿದ ಹಜರತ್
ಒಂದೇ ಓವರ್ನಲ್ಲಿ ಆರು ಸಿಕ್ಸ್ ಬಾರಿಸುವ ಜೊತೆಗೆ ಹಜರತ್ ವೇಗವಾಗಿ 12 ಎಸೆತದಲ್ಲಿ ಅರ್ಧ ಶತಕ ಬಾರಿಸಿ 2007ರಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್ನಲ್ಲಿ ಬಾರಿಸಿದ್ದ ಆರು ಸಿಕ್ಸರ್ ದಾಖಲೆಯನ್ನ ಹಜರತ್ ಅಳಿಸಿ ಹಾಕಿದ್ರು.
2007ರ ಏಕದಿನ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್ ಹರ್ಷಲ್ ಗಿಬ್ಸ್ ದುರ್ಬಲ ನೆದರ್ಲ್ಯಾಂಡ್ ವಿರುದ್ಧ ಆರು ಎಸೆತದಲ್ಲಿ ಆರು ಸಿಕ್ಸ್ ಬಾರಿಸಿ ವಿಶ್ವಕಪ್ನಲ್ಲಿ ಹೊಸ ದಾಖಲೆ ಬರೆದಿದ್ದರು. ಇದು ಬಿಟ್ಟರೆ ಟೆಸ್ಟ್ ಆವೃತ್ತಿಯಲ್ಲಿ ಗ್ಯಾರಿ ಸೊಬರ್ಸ್, ಮೊದಲ ದರ್ಜೆ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ, ನಾಟ್ವೆಸ್ಟ್ ಟಿ20 ಆವರತ್ತಿಯಲ್ಲಿ ಅಲೆಕ್ಸ್ ಹೇಲ್ಸ್, ಹಾಗೂ ರಾಸ್ ವೈಟ್ಲಿ ಕ್ಲಬ್ ಮಟ್ಟದ ಕ್ರಿಕೆಟ್ನಲ್ಲಿ ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ಒಂದೇ ಓವರ್ನಲ್ಲಿ ಆರು ಸಿಕ್ಸ್ ಬಾರಿಸಿದ ಸಾಧನೆ ಮಾಡಿದವರಾಗಿದ್ದಾರೆ.